* ಕರ್ನಾಟಕದಲ್ಲಿಯ ಪಾವಗಡ (ತುಮಕೂರು) ತಾಲ್ಲೂಕಿನ ತಿರುಮಣಿ ಗ್ರಾಮದ ಬಳಿ ಪ್ರಾರಂಭವಾಗಿರುವ ಸೋಲಾರ್ ಪಾರ್ಕ್‌ ನ ಎರಡನೇ ಹಂತದ ವಿಸ್ತರಣೆ ಕಾರ್ಯ ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದ್ದು, ಇದು ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ಎಂಬ ಹಿರಿಮೆಗೆ ಪಾತ್ರವಾಗಲಿದೆ. * ಸೋಲಾರ್ ಪಾರ್ಕ್‌ ನ ಎರಡನೇ ಹಂತದ ವಿಸ್ತರಣೆ 2025ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು, ಇಲ್ಲಿ ಒಟ್ಟು 300 ಮೆಗಾ ವಾಟ್ ಸೌರ ವಿದ್ಯುತ್ ಉತ್ಪಾದನೆಯಾಗಲಿದೆ.* ಈ ಯೋಜನೆಯ ಪ್ರಕಾರ, ರಾಜ್ಯದ ತುಮಕೂರು ಜಿಲ್ಲೆಯ ಸೋಲಾರ್ ಪಾರ್ಕ್ ಮುಂದಿನ ದಿನಗಳಲ್ಲಿ 3,000 ಮೆಗಾವ್ಯಾಟ್ ಹೆಚ್ಚುವರಿ ಸೌರಶಕ್ತಿಯನ್ನು ಸೇರಿಸಲು ನಿರ್ಧರಿಸಲಾಗಿದೆ.* ಕೇಂದ್ರೀಯ ವಿದ್ಯುಚ್ಛಕ್ತಿ ಪ್ರಾಧಿಕಾರವು (CEA) ಅಂತರ-ರಾಜ್ಯ ಪ್ರಸರಣ ಜಾಲಗಳ ಮೂಲಕ ಸುಮಾರು 17.5 GW ಸೌರಶಕ್ತಿಯನ್ನು ಸ್ಥಳಾಂತರಿಸಲು ಯೋಜಿಸಿದೆ. * ಉತ್ತರ ಕರ್ನಾಟಕದ ಬೀದರ್.ಕಲಬುರಗಿ, ಹಾವೇರಿ, ಗದಗ ಸೇರಿದಂತೆ ಇತರ ಭಾಗಗಳಲ್ಲಿ ಸೋಲಾರ್ ಪಾರ್ಕ್ ಆರಂಭಿಸಲು ಸಿದ್ಧತೆ ನಡೆಯುತ್ತಿದೆ.