* ತುಳು ಭಾಷೆಯು ಬೇರೆ ಉಳಿದ ಎಲ್ಲ ಭಾಷೆಗಳಷ್ಟೇ ಪ್ರಾಚೀನವಾದ ಭಾಷಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಬೆಳವಣಿಗೆ ಹೊಂದಿರುವ ರಾಜ್ಯದ ಎರಡನೇ ಅಧಿಕೃತ ಭಾಷೆ ಎಂದು ಘೋಷಿಸಲು ಅರ್ಹವಾಗಿದೆ ಎಂದು ಡಾ.ಎಂ. ಮೋಹನ್‌ ಆಳ್ವ ಸಮಿತಿ ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡಿದೆ.* ದ್ರಾವಿಡ ಭಾಷಾ ವರ್ಗದ ಪ್ರಾಚೀನ ಸ್ವತಂತ್ರವೂ ಆದ ತುಳು ಭಾಷೆಗೆ ರಾಜ್ಯದ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ದೊರೆತರೆ, ಯುನೆಸ್ಕೋ ವರದಿಯಲ್ಲಿ ನಶಿಸಿ ಹೋಗುತ್ತಿರುವ ಭಾಷಾ ಪಟ್ಟಿಯಲ್ಲಿರುವ ಈ ಭಾಷೆ ಉಳಿಸಿ, ಬೆಳೆಸಿದ ಮತ್ತು ತುಳುವರಿಗೆ ನೈತಿಕ ಧೈರ್ಯ ತುಂಬಿದ ಶ್ರೇಯ ಸರಕಾರದ್ದಾಗುತ್ತದೆ. * ತುಳುವಿಗೆ ಸಂಬಂಧಿಸಿದಂತೆ ಅಕ್ಷರಾಭ್ಯಾಸ ಇಲ್ಲದ ತುಳುವರಿಗೆ ಮತ್ತು ದೇಶ, ವಿದೇಶಗಳಿಂದ ಬರುವ ತುಳುವರಿಗೆ ಬ್ಯಾಂಕಿಂಗ್ ವ್ಯವಹಾರ, ನ್ಯಾಯಾಂಗ ವ್ಯವಸ್ಥೆ, ವಿವಿಧ ಇಲಾಖೆ ಗಳೊಂದಿಗೆ ಸಂವಹನ ಸುಲಭವಾಗುತ್ತದೆ. ಹಾಗೂ ಇದರಿಂದ ಆಡಳಿತ, ವ್ಯವಹಾರಗಳು ಸಹ ಹೆಚ್ಚು ಜನಸ್ನೇಹಿಯಾಗುತ್ತದೆ’ಎಂಬುವುದಾಗಿ  ವರದಿಯಲ್ಲಿ ಪ್ರತಿಪಾದಿಸಲಾಗಿದೆ.