* ಕರ್ನಾಟಕ ಸ್ಟ್ಯಾಂಪ್ (ತಿದ್ದುಪಡಿ) ಮಸೂದೆ- 2023ಯನ್ನು ಡಿಸೇಂಬರ್ 7 ರಂದು 54 ನೋಂದಣಿಯೇತರ ದಾಖಲೆಗಳ ಮೇಲಿನ ಮುದ್ರಾಂಕ ಶುಲ್ಕದ ಗಮನಾರ್ಹ ಏರಿಕೆಯ ಅವಕಾಶ ವಿಧಾನಸಭೆಯಲ್ಲಿ ಮಂಡಿಸಲಾಯಿತು. * ದತ್ತು, ಅಡಮಾನ, ಹಸ್ತಾಂತರ ಪ್ರಮಾಣಪತ್ರ, ಒಪ್ಪಂದ ಪತ್ರ, ಸಾಲದ ಕರಾರು ಸೇರಿದಂತೆ ವಿವಾಹ ವಿಚ್ಚೇದನ ಪ್ರಮಾಣಪತ್ರ, ವಿಭಾಗ ಪತ್ರ, ಬಾಂಡ್, ಗುತ್ತಿಗೆ ಒಪ್ಪಂದ ಸಹ ಈ ಮಸೂದೆ ವ್ಯಾಪ್ತಿಯಲ್ಲಿವೆ. * ಕಂಪನಿ ಆರಂಭಕ್ಕೆ ಸಂಬಂಧಿಸಿದ ಒಪ್ಪಂದ, ಚಿಟ್ ಫಂಡ್ ಒಪ್ಪಂದ, ವಕೀಲರ ಪ್ರಮಾಣಪತ್ರಗಳ ಮುದ್ರಾಂಕ ಶುಲ್ಕವನ್ನು ಹೆಚ್ಚಿಸುವ ಪ್ರಸ್ತಾವವೂ ಈ ಮಸೂದೆಯಲ್ಲಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಮಸೂದೆಯನ್ನು ಸದನದಲ್ಲಿ ಮಂಡಿಸಿದರು.