* ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಬಳಸಲಾಗಿದ್ದ ಕೋವಿಶೀಲ್ಡ್ ಲಸಿಕೆಯನ್ನು ತಯಾರಿಸಿದ್ದ ಬ್ರಿಟನ್ - ಸ್ವೀಡನ್ ಮೂಲದ ಬಹುರಾಷ್ಟ್ರೀಯ ಕಂಪನಿಯಾದ ಆಸ್ಟ್ರಾಜೆನಿಕಾ ಜಗತ್ತಿನಾದ್ಯಂತ ಬಿಡುಗಡೆ ಮಾಡಿದ್ದ ಕೋವಿಶೀಲ್ಡ್ ಲಸಿಕೆಯನ್ನು ಹಿಂಪಡೆಯುತ್ತಿರುವುದಾಗಿ ಘೋಷಿಸಿದೆ.* ಆಸ್ಟ್ರಾಜೆವಿಕಾ ಮತ್ತು ಆಕ್ಸ್ ಫರ್ಡ್ ಯೂನಿರ್ವಸಿಟಿ ಜಂಟಿಯಾಗಿ ಈ ಕೋವಿಡ್ 19 ಲಸಿಕೆಯನ್ನು ತಯಾರಿಸಿತ್ತು. ಭಾರತದಲ್ಲಿ ಸೇರಂ ಸಂಸ್ಥೆ ಕೋವಿಶೀಲ್ಡ್ ಅನ್ನು ತಯಾರಿಸಿತ್ತು.* ಈ ಲಸಿಕೆಯಿಂದ ಕೆಲವೊಂದು ಅಡ್ಡ ಪರಿಣಾಮ ಬೀರುತ್ತಿದೆ ಎಂಬುದನ್ನು ಆತ್ಮಜಿನಿಕಾ ಒಪ್ಪಿಕೊಂಡಿತ್ತು. ಆದರೆ ಇದೀಗ ಲಸಿಕೆ ಹಿಂಪಡೆಯುತ್ತಿರುವುದು ಅಡ್ಡಪರಿಣಾಮ ಕಾರಣಕ್ಕಾಗಿ ಅಲ್ಲ, ಇದೊಂದು ಕಾಕತಾಳೀಯ ವಿಷಯವಾಗಿದೆ ಎಂದು ಆಸ್ಟ್ರಾಜೆನಿಕಾ ತಿಳಿಸಿದೆ.* ವಾಣಿಜ್ಯ ಕಾರಣಗಳಿಂದಾಗಿ ಕೋವಿಡ್ 19 ಲಸಿಕೆ ಕೋವಿಶೀಲ್ಡ್ ಅನ್ನು ಜಾಗತಿಕವಾಗಿ ಹಿಂಪಡೆಯುತ್ತಿರುವುದಾಗಿ ಲಸಿಕೆ ತಯಾರಿಕೆ ಕಂಪನಿ ಆಸ್ಟ್ರಾಜೆನಿಕಾ ತಿಳಿಸಿರುವುದಾಗಿದೆ. ಎಂದು ವರದಿ ಮಾಡಿದೆ.* ಕೋವಿಶೀಲ್ಡ್ ಲಸಿಕೆಯಿಂದ ಸಾವಿಗೆ ಕಾರಣವಾಗುತ್ತಿದೆ ಎಂದು ಆರೋಪಿಸಿ ಬ್ರಿಟನ್ ನಲ್ಲಿ ಆಸ್ಟ್ರಾಜೆನಿಕಾ ವಿರುದ್ಧ 100 ಮಿಲಿಯನ್ ಪೌಂಡ್ ಮೊಕದ್ದಮೆ ಹೂಡಲಾಗಿದೆ.