* ಖ್ಯಾತ ಹಿರಿಯ ನಟ ನಿರ್ಮಾಪಕ 81 ವರ್ಷ ವಯಸ್ಸಿನ ದ್ವಾರಕೀಶ್ ಅವರು ಏಪ್ರಿಲ್ 16 (ಮಂಗಳವಾರ) ರಂದು ಎಲೆಕ್ಟ್ರಾನಿಕ್ ಸಿಟಿಯ ಸ್ವಗೃಹದಲ್ಲಿ ಹೃದಯಾಘಾತದಿಂದ  ಕೊನೆಯುಸಿರೆಳೆದಿದ್ದಾರೆ.* ಚಿತ್ರ ನಿರ್ಮಾಣ, ನಿರ್ದೇಶನ, ನಟನೆ ಮೂಲಕ ಜನಪ್ರಿಯರಾಗಿದ್ದ ದ್ವಾರಕೀಶ್ ಅವರು ಹಲವು ಚಿತ್ರಗಳ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. * 1964ರಲ್ಲಿ 'ವೀರ ಸಂಕಲ್ಪ' ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ದ್ವಾರಕೀಶ್ ಅವರು ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡರು.* ಡಾ.ರಾಜಕುಮಾರ್ ಅವರು ಅಭಿನಯಸಿದ 'ಮೇಯರ್ ಮುತ್ತಣ' ಎಂಬ ಸಿನಿಮಾ ನಿರ್ಮಿಸಿಸುವ ಮೂಲಕ ಸ್ವತಂತ್ರ ನಿರ್ಮಾಪಕರಾದರು. ದ್ವಾರಕೀಶ್ ಅವರು ಸುಮಾರು 40 ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿದ್ದಾರೆ.* 1985ರಲ್ಲಿ 'ನೀ ಬರೆದ ಕಾದಂಬರಿ' ಸಿನಿಮಾ ನಿರ್ದೇಶಿಸುವ ಮೂಲಕ ಚಿತ್ರ ನಿರ್ದೇಶನಕ್ಕೂ ಕಾಲಿಟ್ಟರು. 'ಜನ್ಮರಹಸ್ಯ', 'ಮಂಕುತಿಮ್ಮ', 'ಪೆದ್ದ ಗೆದ್ದ', 'ಕಿಟ್ಟು ಪುಟ್ಟು', 'ಸಿಂಗಾಪುರದಲ್ಲಿ ರಾಜಾಕುಳ್ಳ', 'ಆಪ್ತಮಿತ್ರ', 'ಪ್ರಚಂಡ ಕುಳ್ಳ', 'ಗುರುಶಿಷ್ಯರು', 'ಆಟಗಾರ', 'ವಿಷ್ಣುವರ್ಧನ್' ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.