* ಫಿನ್‌ಟೆಕ್ ಕಂಪನಿಯಾದ ಭಾರತ್‌ಪೇ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ನಳಿನ್ ನೇಗಿ ಅವರನ್ನು ನೇಮಕ ಮಾಡಲಾಗಿದೆ ಎಂದು ಇನ್ಟೆಕ್ ಕಂಪನಿ ಭಾರತ್ ಪೇ ಏಪ್ರಿಲ್ 16 ರಂದು (ಮಂಗಳವಾರ) ಪ್ರಕಟಿಸಿದೆ.* ಸುಹೇಲ್ ಸಮೀರ್ ಅವರು ಸಿಇಒ ಹುದ್ದೆಯಿಂದ ಕೆಳಗಿಳಿದ ನಂತರ 2023ರ ಜನವರಿಯಿಂದ ನೇಗಿ ಅವರು ಹಂಗಾಮಿ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. * 2022ರಲ್ಲಿ ಭಾರತ್‌ ಕಂಪನಿಗೆ ಸೇರ್ಪಡೆಗೊಂಡಿದ್ದರು. ಫಿನ್‌ಟೆಕ್‌ ಹಾಗೂ • ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅವರಿಗೆ 28 ವರ್ಷಗಳಷ್ಟು ಸೇವಾನುಭವ ಹೊಂದಿದ್ದಾರೆ.* 'ಹಂಗಾಮಿ ಸಿಇಒ ಆಗಿದ್ದ ವೇಳೆ ನಳಿನ್ ನೇಗಿ ಅವರು ಭಾರತ್‌ಪೇ ಬೆಳವಣಿಗೆಗೆ ಉತ್ತಮ ಕೊಡುಗೆ ನೀಡಿದ್ದಾರೆ. ಅದರ ಜೊತೆಗೆ ಫಿನ್‌ಟೆಕ್ ವಲಯದಲ್ಲಿ ಅವರಿಗೆ ಇರುವ ಅನುಭವವು ಕಂಪನಿಯು ಮತ್ತಷ್ಟು ಬೆಳವಣಿಗೆ ಹೊಂದಲು ನೆರವಾಗಲಿದೆ' ಎಂದು ಭಾರತ್‌ಪೇ ಆಡಳಿತ ಮಂಡಳಿಯ ಮುಖ್ಯಸ್ಥ ರಜನೀಶ್ ಕುಮಾರ್ ಅವರು ತಿಳಿಸಿದ್ದಾರೆ.* ಭಾರತ್‌ಪೇ FY23 ರಲ್ಲಿ ಕಾರ್ಯಾಚರಣೆಯ ಆದಾಯದಲ್ಲಿ 182 ಶೇಕಡಾ ಹೆಚ್ಚಳವನ್ನು ದಾಖಲಿಸಿದೆ ಮತ್ತು ಅಕ್ಟೋಬರ್ '23 ಅನ್ನು ಮೊದಲ EBITDA ಧನಾತ್ಮಕ ತಿಂಗಳಾಗಿ ಮಾಡಿದೆ ಎಂದು ಭಾರತ್‌ಪೇ ಹೇಳಿಕೆಯಲ್ಲಿ ತಿಳಿಸಿದೆ.