* ನೈಸರ್ಗಿಕವಾಗಿಯೇ ಕೆರೆಗಳನ್ನು ಅಭಿವೃದ್ಧಿಪಡಿಸಿ,ಅವುಗಳ ಸೌಂದರ್ಯ ಹೆಚ್ಚಿಸಲು ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ “ಹಸುರು ಸರೋವರ’ ಎಂಬ ವಿಶೇಷ ಅಭಿಯಾನ ಹಮ್ಮಿಕೊಂಡಿದೆ.* ಪರಿಸರ ಸಂರಕ್ಷಣೆ, ಹಸುರೀಕರಣ ಮತ್ತು ಪ್ರದೇಶಾಭಿವೃದ್ಧಿಗಾಗಿ ಇಲಾ ಖೆಯು ನರೇಗಾ ಯೋಜನೆಯಡಿ ಜಲಸಂಜೀವಿನಿ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿರುವ “ಪಂಚ ಅಭಿ ಯಾನ’ಗಳಲ್ಲಿ ಹಸುರು ಸರೋವರ ಅಭಿಯಾನವೂ ಒಂದಾಗಿದೆ.* ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಈಗಾಗಲೇ “ಆಜಾದಿ ಕಾ ಅಮೃತ್ ಸರೋವರ’ ಯೋಜನೆಯಡಿ ರಾಜ್ಯದ ಎಲ್ಲ ಜಿಲ್ಲೆಯಲ್ಲಿ ಒಂದು ಎಕ್ರೆಗಿಂತ ಹೆಚ್ಚು ವಿಸೀ¤ರ್ಣದ 75 ಕೆರೆಗಳನ್ನು ಗುರುತಿಸಿ, ಅಭಿವೃದ್ಧಿಗೆ ಮುಂದಾಗಿದೆ. ಅಮೃತ್ ಸರೋವರಗಳ ಅಭಿವೃದ್ಧಿಗಾಗಿ ರಾಜ್ಯದಲ್ಲಿ ಆಯ್ಕೆ ಮಾಡಿರುವ ಕೆರೆಗಳಲ್ಲಿಯೇ 100 ಕೆರೆಗಳನ್ನು ಆಯ್ಕೆ ಮಾಡಿಕೊಂಡು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹಸುರು ಸರೋವರಗಳನ್ನಾಗಿ ಅಭಿವೃದ್ಧಿ ಪಡಿಸಲು ಇಲಾಖೆ ಯೋಜನೆ ಹಾಕಿಕೊಂಡಿದೆ.* ಕೆರೆಗಳ ಅಭಿವೃದ್ಧಿಯಲ್ಲಿ ಸಿಮೆಂಟ್ ಕಾಂಕ್ರೀಟ್, ಪ್ಲಾಸ್ಟಿಕ್ ಬಳಸದೆ ಕೇವಲ ನೈಸರ್ಗಿಕವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ ಅಭಿವೃದ್ಧಿಪಡಿಸುವ ಕೆರೆಗಳೇ ಹಸುರು ಸರೋವರಗಳು.