* ನೆರೆದೇಶಗಳೊಂದಿಗೆ ಉದ್ಯಮದಲ್ಲಿ ಪರಸ್ಪರ ಸಹಕಾರವನ್ನು ವೃದ್ಧಿಸುವ ಉದ್ದೇಶದೊಂದಿಗೆ ಭಾರತವು ತನ್ನ ನೆರೆರಾಷ್ಟ್ರಗಳೊಂದಿಗೆ “ನವೋದ್ಯಮ ವಿನಿಮಯ ಕಾರ್ಯಕ್ರಮ” ಆಯೋಜಿಸಲು ಬಾಂಗ್ಲಾದೇಶದೊಂದಿಗೆ ವಿನಿಯಮ ಯೋಜನೆಗೆ ಚೌಕಟ್ಟು ಸಿದ್ಧಪಡಿಸಲಾಗಿದ್ದು, ಸದ್ಯದಲ್ಲೇ ಭೂತಾನ್‌ ಮತ್ತು ನೇಪಾಳದೊಂದಿಗೂ ಈ ಯೋಜನೆ ಸಾಕಾರಗೊಳ್ಳಲಿದೆ.* ನವೋದ್ಯಮಿಗಳಿಗೆ ಪ್ರೋತ್ಸಾಹಿಸುವ, ದೇಶದಲ್ಲಿ ಸ್ಟಾರ್ಟಪ್‌ ವ್ಯವಸ್ಥೆಯನ್ನು ರೂಪಿಸುವ ಮತ್ತು ಉದ್ಯೋಗಾಕಾಂಕ್ಷಿಗಳ ಬದಲಾಗಿ ಉದ್ಯೋಗ ಸೃಷ್ಟಿಸುವವರ ಭಾರತವನ್ನು ಬದಲಾಯಿಸುವ ನಿಟ್ಟಿನಲ್ಲಿ 2016ರಲ್ಲಿ ಕೇಂದ್ರ ಸರ್ಕಾರವು ಸ್ಟಾರ್ಟಪ್‌ ಇಂಡಿಯಾ ಯೋಜನೆ ಆರಂಭಿಸಿತ್ತು.