* ಕಪಾಸ ಕ್ರಾಂತಿ ಮಿಷನ್ ಮಹತ್ವಾಕಾಂಕ್ಷಿ ಯೋಜನೆಯನ್ನು ಕೇಂದ್ರ ಸಚಿವ ಜಿ.ಕಿಶನ ರೆಡ್ಡಿ ಅವರು ಹೈದರಾಬಾದನಲ್ಲಿ ಘೋಷಿಸಿದರು.ಭಾರತ ಅತಿ ಹೆಚ್ಚು ಹತ್ತಿ ಉತ್ಪಾದಿಸುವ ದೇಶವಾಗಿದೆ.* ದೇಶದ ಹತ್ತಿ ಉತ್ಪಾದನೆ ಹಾಗೂ ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 600 ಕೋಟಿ ರೂ.ಮೌಲ್ಯದ ಕಪಾಸ ಮಿಷನ್ ಅನ್ನು ಪ್ರಾರಂಭಿಸಿದೆ.* ಮಹಾರಾಷ್ಟ್ರದ ಅಕೊಲಾ ಭಾಗದಲ್ಲಿ ಹೈ-ಡೆನ್ಸಿಟಿ ಪ್ಲಾಂಟೇಶನ ವಿಧಾನದಿಂದ ಹತ್ತಿ ಉತ್ಪಾದನೆ ದುಪ್ಪಟಾಗಿದೆ.ಈ ವಿಧಾನದಿಂದ ಹೆಚ್ಚಿನ ಇಳುವರಿ ಪಡೆಯುವುದು,ವೈಜ್ಞಾನಿಕ ಕೃಷಿ ವಿಧಾನಗಳನ್ನು ಪರಿಚಯಿಸುವುದು.* ರೈತರಿಗೆ ತಂತ್ರಜ್ಞಾನ ಆಧಾರಿತ ಹತ್ತಿ ಖರೀದಿ ಮತ್ತು ಮಾರಾಟ ವೇದಿಕೆ ನಿರ್ಮಾಣ,ತರಬೇತಿ,ಹಾಗೂ ಅನುಭವ ಪ್ರವಾಸಗಳ ಮೂಲಕ ಜ್ಞಾನ ಪಸರಿಸುವುದು.* ಹತ್ತಿ ನಿಗಮ ಜೊತೆಗೆ ಸಹಕಾರ ಒಪ್ಪಂದಗಳು ಪೂರ್ಣಗೊಂಡಿವೆ.ಶೀಘ್ರದಲ್ಲೇ 122 ಖರೀದಿ ಕೇಂದ್ರಗಳು ಹಾಗೂ 345 ಜಿನ್ನಿಂಗ್ ಕೇಂದ್ರಗಳು ಆರಂಭವಾಗಲಿವೆ.* ತೆಲಂಗಾಣದಲ್ಲಿ 24 ಲಕ್ಷಕ್ಕೂ ಹೆಚ್ಚು ರೈತರಿಗೆ ಅಕೋಲಾಕ್ಕೆ ಅಧ್ಯಯನ ಪ್ರವಾಸಗಳನ್ನು ಆಯೋಜಿಸಲಾಗುತ್ತಿದ್ದು,ಬೀಜ ವಿತರಣೆ ಮತ್ತು ಮತ್ತು ತರಬೇತಿ ಕಾರ್ಯಗಳು ನಡೆಯಲಿವೆ.* ಖರೀದಿ ಪಾರದರ್ಶಕತೆಗೆ ಕಪಾಸ ಕಿಸಾನ ಎಂಬ ಹೊಸ ನಿರ್ದೇಶನ ಸದ್ಯದಲ್ಲೇ ಮೊಬೈಲ್ ಅಪ್ಲಿಕೇಶನ್ ಬಿಡುಗಡೆಯಾಗಲಿದೆ.ಇದರ ಮೂಲಕ ರೈತರು ತಮ್ಮ ಹತ್ತಿ ಮಾರಾಟದ ದಿನ ನಿಗದಿ ಮಾಡಿಕೊಳ್ಳಬಹುದು.* ಈ ಬಗ್ಗೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಜಾಗೃತಿ ಅಭಿಯಾನಗಳು ನಡೆಯುತ್ತಿವೆ.* ಸರಕಾರದ ಅಂಕಿ ಅಂಶದ ಪ್ರಕಾರ - 2004 - 2014 : 24,825 ಕೋಟಿ ರೂ,2014 - 2024 : 1.37 ಲಕ್ಷ ಕೋಟಿ ರೂ.* ತೆಲಂಗಾಣದಲ್ಲಿ 58 ,000 ಕೋಟಿ ರೂ.ಹಾಗೂ ಆಂದ್ರಪ್ರದೇಶದಲ್ಲಿ 8 ,000 ಕೋಟಿ ರೂ.ಮೌಲ್ಯದ ಹತ್ತಿ ಖರೀದಿ ಪಡೆದಿದೆ.* ಕಳೆದ 10 ವರ್ಷಗಳಲ್ಲಿ ಹತ್ತಿಯ ಕನಿಷ್ಠ ಬೆಂಬಲ ಬೆಲೆ ದ್ವಿಗುಣವಾಗಿದೆ.