Job Description: * ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಮಿಷನ್ "ಗಗನ್ ಯಾನ್" ಎಂಬ ಹೆಸರಿನಿಂದ ನಡೆಯಲಿದ್ದು, ಈಗಾಗಲೇ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. * ಎಲ್ಲವೂ ಸುಸೂತ್ರವಾಗಿ ನಡೆದರೆ 2024ರಲ್ಲಿ ಭಾರತದ ಮೊದಲ ಬಾಹ್ಯಾಕಾಶ ಯಾತ್ರೆ ಆರಂಭಗೊಳ್ಳಲಿದೆ. ಇಸ್ರೋ 2021 ರಲ್ಲಿ 'ಗಗನ್ ಯಾನ್' ಅನ್ನು ಉಡಾವಣೆ ಮಾಡುವುದಾಗಿ ಘೋಷಿಸಿದ್ದರೂ, ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಮಿಷನ್ ವಿಳಂಬವಾಗಿದೆ. * ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಗಗನ್‌ಯಾನ್‌ನ ನಾಲ್ಕು ಅಬಾರ್ಟ್ ಮಿಷನ್‌ಗಳ ಮೊದಲ ಪರೀಕ್ಷಾ ವಾಹನ ಮಿಷನ್ (ಟಿವಿ-ಡಿ1) ಅನ್ನು ಈ ವರ್ಷದ ಮೇ ತಿಂಗಳಲ್ಲಿ ಕೈಗೊಳ್ಳಲಾಗುವುದು ಎಂದು ಘೋಷಣೆಮಾಡಿದರು.