* 1989 ರ ಬ್ಯಾಚ್‌ನ ಐಎಎಸ್ ಅಧಿಕಾರಿ ಕೆ ಸಂಜಯ್ ಮೂರ್ತಿ ಅವರು ಭಾರತದ ಹೊಸ ನಿಯಂತ್ರಣಾಧಿಕಾರಿ ಮತ್ತು ಮಹಾಲೇಖಾ ಪರೀಕ್ಷ(ಸಿಎಜಿ) ಆಗಿ ನೇಮಕಗೊಂಡಿದ್ದಾರೆ. * ಪ್ರಸ್ತುತ ಕೆ ಸಂಜಯ್ ಮೂರ್ತಿ ಅವರು ಶಿಕ್ಷಣ ಸಚಿವಾಲಯದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. * ಭಾರತದ ಸಂವಿಧಾನದ 148 ನೇ ವಿಧಿಯ ಷರತ್ತು (1) ರ ಮೂಲಕ ಶ್ರೀ ಕೆ. ಸಂಜಯ್ ಮೂರ್ತಿ ಅವರನ್ನು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಗಿ ರಾಷ್ಟ್ರಪತಿಗಳು ನೇಮಿಸಿದ್ದಾರೆ. * ಗಿರೀಶ್ ಚಂದ್ರ ಮುರ್ಮು ಅವರು ಆಗಸ್ಟ್ 8, 2020 ರಂದು ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಗಿ ಅಧಿಕಾರ ವಹಿಸಿಕೊಂಡರು.* ಅವರು ನವೆಂಬರ್ 20 ರಂದು ತಮ್ಮ ಅವಧಿಯನ್ನು ಪೂರ್ಣಗೊಳಿಸಲಿದ್ದಾರೆ. ಕೆ. ಸಂಜಯ್ ಮೂರ್ತಿ ಅವರು ಗಿರೀಶ್ ಚಂದ್ರ ಮುರ್ಮು ಅವರ ಉತ್ತರಾಧಿಕಾರಿಯಾಗಲಿದ್ದಾರೆ.* ಮುರ್ಮು ಅವರ ಅಧಿಕಾರಾವಧಿಯಲ್ಲಿ ಎನ್‌ಡಿಎ ಸರ್ಕಾರದ ಪ್ರಮುಖ ಹೆದ್ದಾರಿ ಕಾರ್ಯಕ್ರಮ, ಭಾರತ್ಮಾಲಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಆಡಿಟ್ ಸೇರಿದಂತೆ ಹಲವಾರು ಪ್ರಮುಖ ಆಡಿಟ್ ವರದಿಗಳನ್ನು ಕಂಡಿತು.