* ಕೇಂದ್ರ ಸರ್ಕಾರದ ಭಾರತ್ ಅಕ್ಕಿಗೆ ಪರ್ಯಾಯವಾಗಿ ಕೆ-ರೈಸ್ ತರಲು ಕೇರಳ ಸರ್ಕಾರ ಮುಂದಾಗಿದೆ.*ಈ ಬಗ್ಗೆ ಸಾಧಕ ವರದಿಯನ್ನು ವಾರದೊಳಗೆ ಸಲ್ಲಿಸುವಂತೆ ಆಹಾರ ಸಚಿವ ಜಿ.ಆರ್.ಅನಿಲ್, ನಾಗರಿಕ ಸರಬರಾಜು, ಸಪ್ಲೈಕೋ ನಿರ್ದೇಶಕರಿಗೆ ಹಾಗೂ ಆಹಾರ ಕಾರ್ಯದರ್ಶಿಗೆ ಸೂಚಿಸಿದ್ದಾರೆ.* ಪಡಿತರ ಅಂಗಡಿಯ ಮೂಲಕ ಈಗಾಗಲೇ ಅಕ್ಕಿ ವಿತರಿಸಲಾಗುತ್ತಿದೆ. ಆದರೆ ಇಲ್ಲಿ ಸಾಕಷ್ಟು ಅಕ್ಕಿ ಪಡೆಯಲು ಸಾಧ್ಯವಾಗದ ಬಿಳಿ ಮತ್ತು ನೀಲಿ ಪಡಿತರ ಚೀಟಿದಾರರಿಗೆ ಈ ಪರ್ಯಾಯ ಅಕ್ಕಿಯನ್ನು ಒದಗಿಸುವ ಗುರಿಯನ್ನು ಹೊಂದಲಾಗಿದೆ.* ಬೇರೆ ರಾಜ್ಯಗಳಿಂದ ಕಡಿಮೆ ಬೆಲೆಗೆ ಜಯ ಅಕ್ಕಿ ತರಿಸುವ ಗುರಿಯನ್ನು ಸರ್ಕಾರ ಹೊಂದಿದ್ದು, ಕೇರಳದ ರೈತರಿಂದ ಮಟ್ಟ ಮತ್ತು ಕುರುವಾ ಖರೀದಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಈ ಅಕ್ಕಿಯನ್ನು ಸಪ್ಲೈಕೋ ಮೂಲಕ ವಿತರಿಸಲು ಉದ್ದೇಶಿಸಲಾಗಿದೆ.