* ಕಾರವಾರ ನೌಕಾನೆಲೆಗೆ ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನ ವಾಹಕ 65 ಮೀ. ಅಗಲ ಮತ್ತು 59 ಮೀ ಎತ್ತರದ ಐ.ಎನ್.ಎಸ್. ವಿಕ್ರಾಂತ್ ಯುದ್ಧ ನೌಕೆಯನ್ನು (2022) ಸೆಪ್ಟೆಂಬರ್‌ನಲ್ಲಿ ಕೊಚ್ಚಿನ್ ನೌಕಾನೆಲೆಯಲ್ಲಿ ಲೋಕಾರ್ಪಣೆಗೊಳಿಸಿ ಭಾರತೀಯ ಕದಂಬ ನೌಕಾದಳಕ್ಕೆ ಹಸ್ತಾಂತರಿಸಲಾಗಿತ್ತು. * 'ನೌಕಾನೆಲೆಯ ಎರಡನೇ ಹಂತದ ವಿಸ್ತರಣೆ ಕಾಮಗಾರಿಯಲ್ಲಿ (ಪ್ರಾಜೆಕ್ಟ್ ಸೀಬರ್ಡ್) ಐ.ಎನ್.ಎಸ್. ವಿಕ್ರಾಂತ್ ವಿಮಾನ ವಾಹಕ ಯುದ್ಧನೌಕೆ ನಿಲುಗಡೆಯ ಹಡಗುಕಟ್ಟೆ ನಿರ್ಮಿಸಲಾಗಿದ್ದು, ಈ ಹಡಗು ಕಟ್ಟೆಯಲ್ಲಿ ಐ.ಎನ್.ಎಸ್. ವಿಕ್ರಾಂತ್ ಯುದ್ಧನೌಕೆ ಮೊದಲ ಬಾರಿಗೆ ನಿಲುಗಡೆಯಾಗಿದ್ದು, ನೌಕಾನೆಲೆಯಲ್ಲಿ ಹೆಚ್ಚಿನ ಹಡಗು ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ನೌಕಾನೆಲೆಯ ಅಧಿಕಾರಿಗಳು ತಿಳಿಸಿದ್ದಾರೆ.