➤ ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲಿ ಮತ್ತೊಂದು ಹೊಸ ದಾಖಲೆ ಸೃಷ್ಟಿಯಾಗಿದೆ. ಮೊದಲ ಸೀಸನ್‌ನ ಚಾಂಪಿಯನ್ ತಂಡವಾದ ರಾಜಸ್ಥಾನ ರಾಯಲ್ಸ್ (Rajasthan Royals) ತಂಡವನ್ನು ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಕಾಲ್ ಸೊಮಾನಿ (Kal Somani) ನೇತೃತ್ವದ ಒಕ್ಕೂಟವು ಬರೊಬ್ಬರಿ 15,290 ಕೋಟಿ ರೂ.ಗಳಿಗೆ ಖರೀದಿಸಿದೆ. 2008ರಲ್ಲಿ ಕೇವಲ ₹630 ಕೋಟಿಗೆ ಮಾರಾಟವಾಗಿದ್ದ ಈ ತಂಡ, ಈಗ 24 ಪಟ್ಟು ಹೆಚ್ಚು ಮೌಲ್ಯ ಪಡೆದುಕೊಂಡಿದೆ.➤ ಕಾಲ್ ಸೊಮಾನಿ ಅವರು ತಂತ್ರಜ್ಞಾನ ಮತ್ತು ಎಐ (AI) ಕ್ಷೇತ್ರದ ಪ್ರಮುಖ ಉದ್ಯಮಿಯಾಗಿದ್ದಾರೆ. ಇವರು ಸ್ಥಾಪಿಸಿದ ಪ್ರಮುಖ ಸಂಸ್ಥೆಗಳೆಂದರೆ:- ಇಂಟ್ರಾಎಡ್ಜ್ (IntraEdge): ತಂತ್ರಜ್ಞಾನ ಸೇವೆ ಮತ್ತು ಪರಿಹಾರಗಳು.- ಟ್ರುಯೊಡಾಟ್ ಎಐ (Truyo.ai): ದತ್ತಾಂಶ ಗೌಪ್ಯತೆ ಮತ್ತು ಎಐ ಆಡಳಿತ.- ಅಕಾಡೆಮಿಯನ್ (Acadmeium): ಶಿಕ್ಷಣ ತಂತ್ರಜ್ಞಾನ (EdTech) ಸೇವೆಗಳು.➤ ತೀವ್ರ ಪೈಪೋಟಿ: ಈ ತಂಡವನ್ನು ಖರೀದಿಸಲು ಆದಿತ್ಯ ಬಿರ್ಲಾ ಸಮೂಹ, ಟೈಮ್ಸ್ ಇಂಟರ್‌ನೆಟ್ ಮತ್ತು ಅರ್ಸೆಲರ್ ಮಿತ್ತಲ್ ಸಿಇಒ ಆದಿತ್ಯ ಮಿತ್ತಲ್ ಅವರಂತಹ ದೊಡ್ಡ ಉದ್ಯಮಿಗಳು ಪೈಪೋಟಿ ನಡೆಸಿದ್ದರು. ಆದರೆ ಅಂತಿಮವಾಗಿ ಸೊಮಾನಿ ಒಕ್ಕೂಟ ಯಶಸ್ವಿಯಾಗಿದೆ.➤ ಐಪಿಎಲ್ ತಂಡಗಳ ಮೌಲ್ಯದ ಏರಿಕೆ: 2021ರಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವು ₹7,000 ಕೋಟಿಗೆ ಮಾರಾಟವಾಗಿತ್ತು. ಈಗ ರಾಜಸ್ಥಾನ ರಾಯಲ್ಸ್ ಅದರ ದುಪ್ಪಟ್ಟು ಮೊತ್ತಕ್ಕೆ ಮಾರಾಟವಾಗಿರುವುದು ಐಪಿಎಲ್‌ನ ಜಾಗತಿಕ ಕ್ರೇಜ್ ಮತ್ತು ಆರ್ಥಿಕ ಶಕ್ತಿಯನ್ನು ತೋರಿಸುತ್ತದೆ.