* ಐವತ್ತು ವರ್ಷಗಳಲ್ಲಿ ಕಾವೇರಿ ಕಣಿವೆಯ 12,850 ಚದರ ಕಿ. ಮೀ. ಹಸಿರು ನಾಶವಾಗಿದೆ ಎಂಬ ಭಾರತೀಯ ವಿಜ್ಞಾನ ಸಂಸ್ಥೆಯ ವರದಿಯ ಆಧಾರದಲ್ಲಿ ಕರ್ನಾಟಕ, ತಮಿಳುನಾಡು ಹಾಗೂ ಕೇರಳ ಸರ್ಕಾರಗಳಿಗೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ (ಎನ್‌ಜಿಟಿ) ಪ್ರಧಾನ ಪೀಠ ನೋಟಿಸ್‌ ನೀಡಿದೆ.* ಕರ್ನಾಟಕದಲ್ಲಿ ಶೇ 57 ರಷ್ಟು ಹಸಿರು ನಾಶವಾಗಿದೆ. ತಮಿಳುನಾಡಿ ಶೇ 29 ಹಾಗೂ ಕೇರಳದಲ್ಲಿ ಶೇ 27 ರಷ್ಟು ಹಸಿರು ನಾಶವಾಗಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ ವರದಿ ಮಾಡಿದೆ. * 50 ವರ್ಷಗಳಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಶೇ 15.19ರಷ್ಟು ಅರಣ್ಯ ಪ್ರದೇಶ ಕಡಿಮೆಯಾಗಿದೆ. ಅಭಿವೃದ್ಧಿ ಚಟುವಟಿಕೆಗಳು ಹಾಗೂ ಕಾಡ್ಗಿಚ್ಚು ನಿಂದಾಗಿ ರಾಷ್ಟ್ರೀಯ ಉದ್ಯಾನದ ಪೂರ್ವಭಾಗದಲ್ಲಿ ಅರಣ್ಯ ಗಣನೀಯವಾಗಿ ಕಡಿಮೆಯಾಗಿದೆ. * ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಅರಣ್ಯ ಪ್ರಮಾಣ ಶೇ 11ರಷ್ಟು ಕಡಿಮೆಯಾಗಿದೆ. ಇದಕ್ಕೆ ಮಾನವನ ಹಸ್ತಕ್ಷೇಪ ಕಾರಣ. ಮೀಸಲು ಪ್ರದೇಶದಲ್ಲಿ ತೋಟಗಾರಿಕೆ ಚಟುವಟಿಕೆಗಳು ಭಾರಿ ಹೆಚ್ಚಳ ಆಗಿವೆ. * ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಅಭಯಾರಣ್ಯದಲ್ಲಿ (ಬಿಆರ್‌ಟಿ) ಅರಣ್ಯ ಪ್ರದೇಶ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದು, ಕುರುಚಲು ಕಾಡುಗಳು ಹೆಚ್ಚುತ್ತಿವೆ. ಜತೆಗೆ ಅರಣ್ಯ ಒತ್ತುವರಿ ಜಾಸ್ತಿ ಆಗಿದೆ ಎಂದು ವರದಿಯಲ್ಲಿ ವ್ಯಕ್ತಪಡಿಸಲಾಗಿದೆ.* ಬನ್ನೇರುಘಟ್ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ 1973ರಷ್ಟು ಶೇ 50.40ರಷ್ಟು ದಟ್ಟ ಇತ್ತು, ಅದು 2016ರಲ್ಲಿ ಶೇ 28ಕ್ಕೆ ಕುಸಿದಿದೆ.* ಈ ಪ್ರಕರಣ ನ್ಯಾಯ ಮಂಡಳಿಯು ಚನ್ನೈ ಪೀಠದ ವ್ಯಾಪ್ತಿಗೆ ಬರುತ್ತದೆ, ಹಾಗಾಗಿ ಮುಂದಿನ ವಿಚಾರಣೆಯನ್ನು ಚನ್ನೈ ಪೀಠ ನಡೆಸಲಿದೆ ಎಂದು ಪ್ರಧಾನ ಪೀಠ ತಿಳಿಸಿದೆ.