* ಸ್ಯಾಟ್‌ಕಾಮ್ ಇಂಡಸ್ಟ್ರಿ ಅಸೋಸಿಯೇಷನ್- ಇಂಡಿಯಾ ಆಯೋಜಿಸಿರುವ 'ಇಂಡಿಯಾ ಸ್ಪೇಸ್ ಕಾಂಗ್ರೆಸ್' (ಐಎಸ್‌ಸಿ) ಮೂರು ದಿನಗಳ ಸಭೆಯಲ್ಲಿ ನೀತಿ ನಿರೂಪಕರು, ಉದ್ಯಮಿಗಳು ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.* ಸ್ಯಾಟ್‌ಕಾಮ್ ಇಂಡಸ್ಟ್ರಿ ಅಸೋಸಿಯೇಷನ್ ಇಂಡಿಯಾ ಆಯೋಜಿಸಿರುವ ಮೂರು ದಿನಗಳ ಈವೆಂಟ್‌ನ ಥೀಮ್ 'ಬ್ರಿಡ್ಜಿಂಗ್ ಬೌಂಡರೀಸ್, ಟ್ರಾನ್ಸ್‌ಫಾರ್ಮಿಂಗ್ ಟುಮಾರೊ'. ಈವೆಂಟ್ ಜೂನ್ 26 ರಿಂದ 28 ರವರೆಗೆ ನಡೆಯಲಿದೆ ಮತ್ತು ಪ್ರಪಂಚದಾದ್ಯಂತ 800 ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ.* ಇಂಡಿಯಾ ಸ್ಪೇಸ್ ಕಾಂಗ್ರೆಸ್ ಜೂನ್ 26 ರಿಂದ (ಬುಧವಾರ) ಈ ಸಭೆ ಪ್ರಾರಂಭವಾಗಲಿದೆ. ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್, ಭಾರತದ ಬಾಹ್ಯಾಕಾಶ ನಿಯಂತ್ರಕ ಇನ್- ಸ್ಪೇಸ್ ಮುಖ್ಯಸ್ಥ ಪವನ್ ಕುಮಾರ್ ಗೋಯೆಂಕಾ, ಇಟಲಿ ಮತ್ತು ಆಸ್ಟ್ರೇಲಿಯಾ ನಿರ್ವಾಹಕರು ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ.