* ಜಿ20 ರಾಷ್ಟ್ರಗಳ ಶಿಕ್ಷಣ ಸಚಿವರು ಜೂನ್‌ 22ರಂದು ಪುಣೆಯಲ್ಲಿ ಸಭೆ ಸೇರಲಿದ್ದಾರೆ. ಜಿ-20 ಶಿಕ್ಷಣ ಸಮೂಹದ ಸಭೆ ಜೂನ್ 19 ರಿಂದ 21ರವರೆಗೆ ನಡೆಯಲಿದೆ. ನಾಲ್ಕನೆಯ ಮತ್ತು ಅಂತಿಮ ಸಭೆ ಇದಾಗಿದೆ.* ಪುಣೆಯಲ್ಲಿ ನಡೆಯುವ ಉದ್ದೇಶಿತ ಸಭೆಯು 'ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ ಅಡಿಪಾಯದ ಖಾತರಿ' ಘೋಷವಾಕ್ಯದಡಿ ನಡೆಯಲಿದೆ. ಶಿಕ್ಷಣ ಸಚಿವಾಲಯವು ಸಭೆಯ ಆತಿಥ್ಯ ವಹಿಸಿದೆ. 22ರಂದು ಸದಸ್ಯ ರಾಷ್ಟ್ರಗಳ ಶಿಕ್ಷಣ ಸಚಿವರ ಸಭೆ ನಡೆಯಲಿದೆ.* ಜಿ-20 ಶಿಕ್ಷಣ ಕಾರ್ಯ ಸಮೂಹದ-> ಮೊದಲ ಸಭೆಯು ಜನವರಿ ತಿಂಗಳಲ್ಲಿ ಚೆನ್ನೈನಲ್ಲಿ ನಡೆದಿತ್ತು.-> ಎರಡನೇ ಸಭೆ ಮಾರ್ಚ್‌ ತಿಂಗಳು ಅಮೃತಸರದಲ್ಲಿ ನಡೆದಿತ್ತು.-> ಮೂರನೇ ಸಭೆಯು ಏಪ್ರಿಲ್‌ ತಿಂಗಳು ಭುವನೇಶ್ವರದಲ್ಲಿ ನಡೆದಿತ್ತು.