* ಮೊದಲ ಬಾರಿಗೆ ಭಾರತವು ಈ ವರ್ಷ ಜುಲೈ 21 ರಿಂದ 31 ರವರೆಗೆ ನವದೆಹಲಿಯಲ್ಲಿ 46 ನೇ ಯುನೆಸ್ಕೋದ ವಿಶ್ವ ಪರಂಪರೆ ಸಮಿತಿಯ ಅಧಿವೇಶನವು ನಡೆಯಲಿದೆ.* ದಿಲ್ಲಿಯ ಭಾರತ ಮಂಟಪದಲ್ಲಿ ಅಧಿವೇಶನವು ನಡೆಯಲಿದ್ದು, ನರೇಂದ್ರ ಮೋದಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.* 193 ದೇಶಗಳು 2500 ಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ವಿವಿಧ ಪಕ್ಷಗಳು ಮತ್ತು ಸಲಹಾ ಗುಂಪುಗಳು ಭಾಗವಹಿಸಲಿದ್ದು, ಈ ಅಧಿವೇಶನವು ಜಾಗತಿಕ ಸಾಂಸ್ಕೃ ತಿಕ ರಾಜತಾಂತ್ರಿಕತೆಯ ಮಹತ್ವದ ಘಟ್ಟ ಎನ್ನಲಾಗಿದೆ. * 1946ರ ನವೆಂಬರ್ 4 ರಂದು ಯುನಿಸ್ಕೊ ವನ್ನು ಸ್ಥಾಪಿಸಲಾಯಿತು , ಯುನಿಸ್ಕೊದ ಸದಸ್ಯತ್ವವನ್ನು 193 ರಾಷ್ಟ್ರಗಳು ಪಡೆದಿವೆ. ಇದರ ಪ್ರಧಾನ ಕಚೇರಿ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿದೆ. ಪ್ರಸ್ತುತ ಯುನಿಸ್ಕೊದ ಡೈರೆಕ್ಟರ್ ಜನರಲ್ ಆಗಿ ಆಡ್ರೆ ಅಝಾಲ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.*  ಯುನೆಸ್ಕೊ ಪ್ರತಿನಿಧಿಗಳು ಪ್ರತಿವರ್ಷ ಸಭೆ ಸೇರಿ, ಅಳಿವಿನಂಚಿನಲ್ಲಿರುವ, ಸಂರಕ್ಷಿಸಬೇಕಾಗಿರುವ ಐತಿಹಾಸಿಕ ಸ್ಥಳಗಳ ಬಗ್ಗೆ ವರದಿ ತರಿಸಿಕೊಂಡು, ಅವುಗಳನ್ನು ಪಟ್ಟಿಗೆ ಸೇರಿಸುವ ಕುರಿತು ತೀರ್ಮಾನ ತೆಗೆದುಕೊಳ್ಳುತ್ತಾರೆ. ಪ್ರತಿವರ್ಷ ಅಳಿವಿನಂಚಿನ ಪಟ್ಟಿಯಲ್ಲಿರುವ ಸ್ಥಳಗಳಿಗೆ 40 ಲಕ್ಷ ಡಾಲರ್ (ಅಂದಾಜು 20 ಕೋಟಿ ರೂಪಾಯಿ) ಒದಗಿಸಲಾಗುತ್ತದೆ. * ವೈವಿಧ್ಯಮಯವಾಗಿರುವ ಮತ್ತು ವೈಶಿಷ್ಟ್ಯ ಹೊಂದಿರುವ ಈಜಿಪ್ಟ್ ನ ಪಿರಾಮಿಡ್, ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್, ಈಕ್ವೆಡಾರ್‌ನ ಗ್ಯಾಲಪಾಗೋಸ್, ಭಾರತದ ತಾಜ್ ಮಹಲ್, ಅಮೆರಿಕದ ಗ್ಯಾಂಡ್ ಕ್ಯಾನ್ಸನ್, ಗ್ರೀಕ್‌ನ ಆಕ್ರೋಪೊಲಿಸ್ ಸೇರಿದಂತೆ 2023ರ ಸೆಪ್ಟೆಂಬರ್ ವೇಳೆಗೆ 1199 ಸ್ಥಳಗಳು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.* ನೈಸರ್ಗಿಕ ತಾಣಗಳ ಪಟ್ಟಿ: ಅಸ್ಸಾಂನ ಕಾಜಿರಂಗ ನ್ಯಾಷನಲ್ ಪಾರ್ಕ್, ರಾಜಸ್ಥಾನದ ಕಿಯೊಲಾಡಿಯೊ ಘಾನ ನ್ಯಾಷನಲ್ ಪಾರ್ಕ್, ಅಸ್ಸಾಂನ ಮಾನಸ ವನ್ಯಜೀವಿ ಅರಣ್ಯಧಾಮ, ಉತ್ತರಾಖಂಡದ ನಂದಾದೇವಿ ನ್ಯಾಷನಲ್ ಪಾರ್ಕ್, ಪಶ್ಚಿಮ ಬಂಗಾಳದ ಸುಂದರಬನ್ಸ್ ನ್ಯಾಷನಲ್ ಪಾರ್ಕ್, ಕರ್ನಾಟಕ, ಮಹಾರಾಷ್ಟ್ರ, ಗೋವಾ, ತಮಿಳುನಾಡು ಮತ್ತು ಕೇರಳದ ಪಶ್ಚಿಮ ಘಟ್ಟಗಳು, ಹಿಮಾಚಲ ಪ್ರದೇಶದ ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕ್.* ಸಾಂಸ್ಕೃತಿಕ ತಾಣಗಳ ಪಟ್ಟಿ: ಆಗ್ರಾ ಕೋರ್ಟ್, ಅಜಂತಾ ಗುಹೆಗಳು, ಸಾಂಚಿಯ ಬೌದ್ಧ ಸ್ಮಾರಕಗಳು, ಮುಂಬಯಿಯ ಛತ್ರಪತಿ ಶಿವಾಜಿ ಟರ್ಮಿನಸ್, ಗೋವಾದ ಚರ್ಚ್‌ಗಳು, ಮಹಾರಾಷ್ಟ್ರದ ಎಲಿಫೆಂಟ್ ಗುಹೆಗಳು, ಎಲ್ಲೋರ ಗುಹೆಗಳು, ಉತ್ತರಪ್ರದೇಶದ ಫತೇಪುರ ಸಿಕ್ರಿ, ತಮಿಳುನಾಡಿನ ಗ್ರೇಟ್ ಲಿವಿಂಗ್ ಚೋಳ ದೇವಾಲಯ, ಮಹಾಬಲಿಪುರಂ, ಕರ್ನಾಟಕದ ಹಂಪಿ, ಪಟ್ಟದಕಲ್ಲು, ರಾಜಸ್ಥಾನದ ಕೋಟೆಗಳು, ದಿಲ್ಲಿಯ ಹುಮಾಯೂನ್ ಗೋರಿ, ಮಧ್ಯಪ್ರದೇಶದ ಖಜುರಾಹೊ, ಬೋಧಗಯಾದ ಮಹಾಬೋಧಿ ದೇಗುಲ, ತಮಿಳುನಾಡಿನ ಮೌಂಟೇನ್ ರೈಲ್ವೇಸ್, ಕುತುಬ್ ಮಿನಾರ್, ಕೆಂಪು ಕೋಟೆ, ಕೊನಾರ್ಕದ ಸೂರ ದೇಗುಲ, ತಾಜ್‌ಮಹಲ್, ಜಂತರ್ ಮಂತರ್, ಶಾಂತಿನಿಕೇತನ, ಬೇಲೂರಿನ ಚನ್ನಕೇಶವ ದೇಗುಲ ಸೇರಿವೆ.