* ಪ್ರತಿ ವರ್ಷ ಜನವರಿ 13 ರನ್ನು ಸಾರ್ವಜನಿಕ ಆಕಾಶವಾಣಿ ಪ್ರಸಾರ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ ಸರಕಾರದ ರೇಡಿಯೋ ವ್ಯವಸ್ಥೆಗೆ ಆಕಾಶವಾಣಿ ಎಂದು ಹೆಸರು ಇದೆ. ಸಂಸ್ಕೃತದ ಈ ಶಬ್ದಕ್ಕೆ “ಆಕಾಶದಿಂದ ಬರುವ ದನಿ” ಎಂದರ್ಥ. * ಕೆಲವರು ರವೀಂದ್ರನಾಥ್ ಠಾಗೋರ್ ಅವರು 1930 ರಲ್ಲಿ ರೇಡಿಯೋ ಪದಕ್ಕೆ 'ಆಕಾಶವಾಣಿ' ಎಂಬ ಪದವನ್ನು ಚಲಾವಣೆಗೆ ತಂದರು ಎಂದು ಹೇಳುತ್ತಾರೆ. ಇನ್ನೂ ಕೆಲವರು 1920 ರಲ್ಲಿ ಕನ್ನಡದ ಬರಹಗಾರರಾದ ನಾ. ಕಸ್ತೂರಿಯವರು ಈ ಪದವನ್ನು ಸೂಚಿಸಿದರು ಎನ್ನುತ್ತಾರೆ.* ಕೇಂದ್ರ ಸರಕಾರವು 1943  ರಲ್ಲಿ ಮಾನ್ಯ ಮಾಡಿ "ಮೈಸೂರು ಆಕಾಶವಾಣಿ "ಎಂದು ನಾಮಕರಣ ಮಾಡಿತು. ಮುಂದೆ "ಆಲ್ ಇಂಡಿಯಾ ರೇಡಿಯೋ"ಗೆ ಕೂಡ 1956ರಲ್ಲಿ ಅಧಿಕೃತವಾಗಿ ಆಕಾಶವಾಣಿ ಎಂದು ಹೆಸರಿಡಲಾಯಿತು.* ಸಾರ್ವಜನಿಕ ರೇಡಿಯೊ ಪ್ರಸಾರ ದಿನದಂದು, ಪ್ರಪಂಚವು ಬಹಳ ವಿಶೇಷವಾದ ರೇಡಿಯೋ ತಂತ್ರಜ್ಞಾನವನ್ನು ಆಚರಿಸುತ್ತದೆ. ರೇಡಿಯೊವನ್ನು ಕಂಡುಹಿಡಿದ ಮತ್ತು ಸಾರ್ವಜನಿಕ ಪ್ರಸಾರವನ್ನು ರೂಪಿಸಿದವರನ್ನು ಈ ದಿನ ಗೌರವಿಸುತ್ತದೆ.ಈ ದಿನ ನಮಗೆ ತಂತ್ರಜ್ಞಾನ ಮತ್ತು ನಮ್ಮ ಜೀವನದಲ್ಲಿ ಅದರ ಪ್ರಾಮುಖ್ಯತೆಗಾಗಿ ಹೊಸ ಭರವಸೆ ಮೂಡಿಸಿದೆ.ಪ್ರತಿಯೊಂದು ದೇಶವು ಪ್ರಸಾರ ವ್ಯವಸ್ಥೆಯನ್ನು ಹೊಂದಿದೆ. ಈ ಪ್ರಸಾರ ವ್ಯವಸ್ಥೆಯನ್ನು ಸರ್ಕಾರವು ನಡೆಸುತ್ತದೆ.* ಇಟಲಿಯ ಮಾರ್ಕೊನಿಯೂ ಸೇರಿದಂತೆ ಆ ಕಾಲಕ್ಕೆ ಹಲವು ವಿಜ್ಞಾನಿಗಳು ಟೆಲಿಗ್ರಾಫ್ ಸಂದೇಶಗಳನ್ನು ತಂತಿಯ ಸಹಾಯವಿಲ್ಲದೇ ಕಳಿಸುವ ವಿಧಾನಗಳ ಕುರಿತು ಸಂಶೋಧನೆ ನಡೆಸಿದ್ದರು. ಇದನ್ನು ಪ್ರಪ್ರಥಮವಾಗಿ ಮಾಡಿದ ಕೀರ್ತಿ ಭಾರತೀಯ ವಿಜ್ಞಾನಿ ಜಗದೀಶ್‌ಚಂದ್ರ ಬೋಸರಿಗೆ ಸಲ್ಲಬೇಕು. * 1895ರಲ್ಲಿಯೇ ಅವರು ತಾವು ಸಂಶೋಧಿಸಿ ನಿರ್ಮಿಸಿದ್ದ ನಿಸ್ತಂತು ಪ್ರೇಷಕವನ್ನು ಕಲಕತ್ತೆಯ ಪುರಭವನದಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಿದರು. ಯಾವ ತಂತಿಯ ಸಂಪರ್ಕವೂ ಇಲ್ಲದೇ ದೂರದಲ್ಲಿಟ್ಟಿದ್ದ ತಮ್ಮ ಉಪಕರಣದಿಂದ ವಿದ್ಯುತ್ ತರಂಗಗಳನ್ನು ಉತ್ಪಾದಿಸಿ ಒಂದು ಕೋಣೆಯಲ್ಲಿಟ್ಟಿದ್ದ ಭಾರವಾದ ವಸ್ತುವನ್ನು ಚಲಿಸುವಂತೆ ಮಾಡಲು ಮತ್ತು ಒಂದು ವಿಶೇಷ ವಿದ್ಯುತ್ ಗಂಟೆ ಬಾರಿಸುವಂತೆ ಮಾಡಲು ಅವನ್ನು ಉಪಯೋಗಿಸಿದರು. ಅವರ ಆ ಉಪಕರಣಕ್ಕೆ ಕೊಹಿಯರರ್ ಎಂದು ಹೆಸರು.ಇಂದಿನ ಬಾನುಲಿ ವ್ಯವಸ್ಥೆಯ ಆದಿಮರೂಪ ಇದಾಗಿದ್ದಿತೆಂದು ಗಮನಿಸಿದರೆ ಅವರ ಸಂಶೋಧನೆಯ ಮಹತ್ತ್ವ ಗೊತ್ತಾಗುತ್ತದೆ. * ಈ ಶೋಧನೆಯ ವಿವರವನ್ನು 1896ರಲ್ಲಿ ಲಂಡನ್ನಿನ ರಾಯಲ್ ಸೊಸೈಟಿಗೆ ತಿಳಿಸಿದಾಗ ಅದು ಆಶ್ಚರ್ಯಚಕಿತವಾಯಿತು. ರಾಯಲ್ ಸೊಸೈಟಿ ಮುಂದೆ ಅವರನ್ನು ಉಪನ್ಯಾಸಗಳಿಗಾಗಿ ಮೂರು ಬಾರಿ ಆಹ್ವಾನಿಸಿ ಗೌರವಿಸುವುದಕ್ಕೆ ಇದು ನಾಂದಿಯಾಯಿತು. * ಇಟಾಲಿಯನ್ ಸಂಶೋಧಕ & ಎಲೆಕ್ಟ್ರಿಕಲ್ ಇಂಜಿನಿಯರ್ ಗುಗ್ಲಿಲ್ಮೊ ಮಾರ್ಕೋನಿ ಅವರು 1895 ರಲ್ಲಿ ತನ್ನ ಮೊದಲ ರೇಡಿಯೊ ಪ್ರಸರಣವನ್ನು  ಸಾಬೀತುಪಡಿಸಿದರು. 1945 ರ ಹೊತ್ತಿಗೆ, ದೂರದರ್ಶನದ ಆವಿಷ್ಕಾರದೊಂದಿಗೆ, ರೇಡಿಯೋ & ಅದರ ಪ್ರಭಾವವು ಪಾಂತರಗೊಂಡಿತು. ಇದು ಜಾಗತಿಕವಾಗಿ ಅತ್ಯಂತ ವ್ಯಾಪಕವಾಗಿ ಲಭ್ಯವಿರುವ ಎಲೆಕ್ಟ್ರಾನಿಕ್ ಸಮೂಹ ಮಾಧ್ಯಮವಾಗಿ ಈಗ ಉಳಿದಿದೆ.ಆದರೆ ಇದು ವಿವಿಧ ಮಾಧ್ಯಮಗಳಿಂದ ಸ್ಪರ್ಧೆಯನ್ನು ಎದುರಿಸಿತು & ಎದುರಿಸುತ್ತಿದೆ. * 21 ನೇ ಶತಮಾನದಲ್ಲಿ, ರೇಡಿಯೋ ಪ್ರಸಾರಗಳು ಡಿಜಿಟಲ್ ಉಪಗ್ರಹ & ಇಂಟರ್ನೆಟ್ ಆಧಾರಿತ ಸೇವೆಗಳಿಂದ ಸ್ಪರ್ಧಾತ್ಮಕ ಒತ್ತಡವನ್ನು ಎದುರಿಸುತ್ತವೆ.