* ಗ್ರಾಮೀಣ ಪ್ರದೇಶಗಳ ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದ 'ಜಲ ಜೀವನ ಮಿಷನ್' ಅನುಷ್ಠಾನದ ಪ್ರಯೋಜನಗಳ ಕುರಿತು ಅಧ್ಯಯನ ನಡೆಸುವಂತೆ ವಿಶ್ವ ಆರೋಗ್ಯ ಸಂಸ್ಥೆಯು ವರದಿಯನ್ನು ಪ್ರಕಟಿಸಿದೆ.* ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ  'ಜಲ ಜೀವನ ಮಿಷನ್' ಅನುಷ್ಠಾನಗೊಳಿಸಿದಲ್ಲಿ ಭೇದಿ ಹಾಗೂ ಸಂಬಂಧಿತ ಕಾಯಿಲೆಗಳಿಂದಾಗಿ ಸಂಭವಿಸುವ 4 ಲಕ್ಷದಷ್ಟು ಸಾವುಗಳನ್ನು ತಡೆಯಲು ಸಾಧ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸಿದೆ.* “ವಿಶ್ವವು ಕುಡಿಯುವ ನೀರು ಮತ್ತು ನೈರ್ಮಲ್ಯ ವಿಷಯದಲ್ಲಿ ನಿಗದಿಪಡಿಸಿರುವ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್‌ಡಿಜಿ) ಸಾಧಿಸಿದ್ದು, ಅದಕ್ಕೆ ಭಾರತವೇ ಕಾರಣವಾಗಲಿದೆ' ಎಂದು ಡಬ್ಲ್ಯುಎಚ್‌ಒ/ಯುನಿಸೆಫ್‌ನ ನೀರು ಪೂರೈಕೆ, ನೈರ್ಮಲ್ಯ ಮತ್ತು ಆರೋಗ್ಯ ಕಾರ್ಯಕ್ರಮದ ಮುಖ್ಯಸ್ಥರಾದ ರಿಚರ್ಡ್ ಜಾನ್‌ಸ್ಟನ್ ತಿಳಿಸಿದ್ದಾರೆ.