* ಕೇಂದ್ರ ಸರ್ಕಾರವು ನವೆಂಬರ್ 2025 ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ₹1.70 ಲಕ್ಷ ಕೋಟಿ ವರಮಾನ ಸಂಗ್ರಹವಾಗಿರುವುದಾಗಿ ತಿಳಿಸಿದೆ. ಇದನ್ನು ಕಳೆದ ವರ್ಷ (2024) ನವೆಂಬರ್ ತಿಂಗಳ ಸಂಗ್ರಹದೊಂದಿಗೆ ಹೋಲಿಸಿದರೆ, ಅದು ₹1.69 ಲಕ್ಷ ಕೋಟಿ ಆಗಿದ್ದು, ವರ್ಷದಿಂದ ವರ್ಷಕ್ಕೆ ಶೇ 0.7ರಷ್ಟು ಮಾತ್ರ ಹೆಚ್ಚಳವಾಗಿದೆ. ಅಕ್ಟೋಬರ್ 2025ರಲ್ಲಿ ₹1.96 ಲಕ್ಷ ಕೋಟಿ ಸಂಗ್ರಹವಾಗಿತ್ತು. * 2025ರ ಸೆಪ್ಟೆಂಬರ್ 22ರಂದು ಜಿಎಸ್‌ಟಿ ಮಂಡಳಿ ನಡೆಸಿದ ದರ ಪರಿಷ್ಕರಣೆಯ ಪರಿಣಾಮವಾಗಿ ಅನೇಕ ಸರಕುಗಳ ಬೆಲೆ ಇಳಿಕೆ ಕಂಡುಬಂದಿದ್ದು, ಅದರ ಪರಿಣಾಮವಾಗಿ ತಾತ್ಕಾಲಿಕವಾಗಿ ಜಿಎಸ್‌ಟಿ ಆದಾಯ ಕುಸಿದಿದೆ.ಮುಖ್ಯ ಅಂಶಗಳು:- ಅಂತರಿಕ ವಹಿವಾಟುಗಳ ಜಿಎಸ್‌ಟಿ: ₹1.24 ಲಕ್ಷ ಕೋಟಿ (ಶೇ 2.3ರಷ್ಟು ಇಳಿಕೆ)- ಆಮದು ಸರಕುಗಳ ಜಿಎಸ್‌ಟಿ: ₹45,976 ಕೋಟಿ (ಶೇ 10.2ರಷ್ಟು ಏರಿಕೆ)- ಜಿಎಸ್‌ಟಿ ಮರುಪಾವತಿ: ₹18,196 ಕೋಟಿ (ಶೇ 4ರಷ್ಟು ಕಡಿಮೆ)- ನಿವ್ವಳ ಜಿಎಸ್‌ಟಿ ಸಂಗ್ರಹ: ₹1.52 ಲಕ್ಷ ಕೋಟಿ* ಕೋವಿಡ್–19 ಸಮಯದಲ್ಲಿ ರಾಜ್ಯಗಳಿಗೆ ನೀಡಿದ ಪರಿಹಾರ ಸಾಲ ಮರುಪಾವತಿಗಾಗಿ ವಿಧಿಸಿದ್ದ ಸೆಸ್ ಅನ್ನು ಒಟ್ಟು ಲೆಕ್ಕಾಚಾರದಲ್ಲಿ ಸೇರಿಸದೆ ಈ ವರದಿ ಪ್ರಕಟಿಸಲಾಗಿದೆ.* ದೇಶದ ಜಿಎಸ್‌ಟಿ ಸಂಗ್ರಹದಲ್ಲಿ ಏರಿಕೆ ಕಂಡ ರಾಜ್ಯಗಳು: ಹರಿಯಾಣ: ಶೇ 17%, ಅಸ್ಸಾಂ: ಶೇ 18%, ಕೇರಳ: ಶೇ 8% ಈ ರಾಜ್ಯಗಳಲ್ಲಿ ವಾಣಿಜ್ಯ ಚಟುವಟಿಕೆ, ತೆರಿಗೆ ಪಾಲನೆ ಮತ್ತು ಆರ್ಥಿಕ ಚಲನವಲನ ಸುಧಾರಿಸಿದ ಪರಿಣಾಮವಾಗಿ ಜಿಎಸ್‌ಟಿ ಸಂಗ್ರಹದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.* ದೇಶದ ಜಿಎಸ್‌ಟಿ ಸಂಗ್ರಹದಲ್ಲಿ ಕುಸಿತ ಕಂಡ ರಾಜ್ಯಗಳು:  ಮಧ್ಯಪ್ರದೇಶ: ಶೇ 17%, ಒಡಿಶಾ: ಶೇ 18% ಈ ರಾಜ್ಯಗಳಲ್ಲಿ ಕೈಗಾರಿಕಾ ಚಟುವಟಿಕೆ ನಿಧಾನಗತಿಯಾಗಿರುವುದು, ತೆರಿಗೆ ಸಂಗ್ರಹದ ಮೇಲ್ವಿಚಾರಣೆಯಲ್ಲಿ ಬದಲಾವಣೆಗಳು ಅಥವಾ ಆರ್ಥಿಕ ಚಲನವಲನದ ಕುಸಿತ ಪ್ರಮುಖ ಕಾರಣಗಳಾಗಿವೆ. * ಮುಖ್ಯ ರಾಜ್ಯಗಳ ಸಂಗ್ರಹ: ಮಹಾರಾಷ್ಟ್ರ: ₹16,122 ಕೋಟಿ — ರಾಷ್ಟ್ರದಲ್ಲೇ ಅತಿ ಹೆಚ್ಚು ಸಂಗ್ರಹಉತ್ತರ ಪ್ರದೇಶ: ₹7,667 ಕೋಟಿ — ಎರಡನೇ ಸ್ಥಾನಕರ್ನಾಟಕ: ₹7,574 ಕೋಟಿ — ಮೂರನೇ ಸ್ಥಾನ (ಶೇ 3% ಏರಿಕೆ)ದೆಹಲಿ: ಏಪ್ರಿಲ್ 2025ರಲ್ಲಿ ಶೃಂಗ ತಲುಪಿ ನಂತರ ಜೂನ್‌ನಿಂದ ಕುಸಿತ ಆರಂಭ, ಸೆಪ್ಟೆಂಬರ್ ನಂತರ ಇಳಿಕೆ ಹೆಚ್ಚಾಗಿದೆ.ಜಿಎಸ್‌ಟಿ ದರ ಪರಿಷ್ಕರಣೆ ನಂತರ ಸರಕುಗಳ ಬೆಲೆ ಕಡಿಮೆ ಆದರೂ, ರಾಷ್ಟ್ರಾದ್ಯಾಂತ ಜಿಎಸ್‌ಟಿ ಸಂಗ್ರಹದಲ್ಲಿ ಸ್ಥಿರತೆ ಉಳಿಯುವ ಮೂಲಕ ಕೆಲವು ರಾಜ್ಯಗಳಲ್ಲಿ ಬೆಳವಣಿಗೆ, ಕೆಲವು ರಾಜ್ಯಗಳಲ್ಲಿ ಕುಸಿತ ಕಂಡು ಬಂದಿದೆ.