* ಮೋನಾಕೊದಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2025ರ ‘ವರ್ಷದ ಅಥ್ಲೀಟ್’ ಗೌರವವನ್ನು ಪ್ರಕಟಿಸಲಾಯಿತು. ಈ ಬಾರಿ ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಎರಡು ಮಂದಿ ಕ್ರೀಡಾಪಟುಗಳು ಅತ್ಯುತ್ತಮ ಸಾಧನೆಗಾಗಿ ಗೌರವಿತರಾಗಿದ್ದಾರೆ.ಪುರುಷ ವಿಭಾಗದಲ್ಲಿ ಸ್ವೀಡನ್‌ನ ಪೋಲ್‌ವಾಲ್ಟ್ ತಾರೆ ಅರ್ಮಾಂಡ್ ಡುಪ್ಲಾಂಟಿಸ್ ಹಾಗೂ ಮಹಿಳಾ ವಿಭಾಗದಲ್ಲಿ ಅಮೆರಿಕದ ಓಟಗಾರ್ತಿ ಸಿಡ್ನಿ ಮೆಕ್‌ಲಾಫಿನ್ ಲೆವೊನ್ ಈ ಅತ್ಯುನ್ನತ ಗೌರವಕ್ಕೆ ಪಾತ್ರರಾದರು.
* ಪುರುಷರ ವಿಭಾಗ ಅರ್ಮಾಂಡ್ ಡುಪ್ಲಾಂಟಿಸ್ (ಸ್ವೀಡನ್ 26 ವರ್ಷ)
- ಪೋಲ್‌ವಾಲ್ಟ್‌ನಲ್ಲಿ ಅಜೇಯ ಸರದಾರ ಎಂದು ಪ್ರಸಿದ್ಧ.
- 2025ರ ಸೆಪ್ಟೆಂಬರ್‌ನಲ್ಲಿ ಟೋಕಿಯೊ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ 6.30 ಮೀ. ಜಿಗಿದು ತನ್ನ 14ನೇ ವಿಶ್ವದಾಖಲೆಯನ್ನು ನಿರ್ಮಿಸಿದರು.
- ಕಳೆದ 2 ವರ್ಷಗಳಲ್ಲಿ ನಡೆದ 16 ಸ್ಪರ್ಧೆಗಳಲ್ಲೂ ಚಿನ್ನ ಗೆದ್ದು ಅಜೇಯರಾಗಿದ್ದಾರೆ. ಹೊರಾಂಗಣ ಹಾಗೂ ಒಳಾಂಗಣ ಇವೆರಡು ವಿಭಾಗಗಳಲ್ಲೂ ವಿಶ್ವ ಚಾಂಪಿಯನ್.
- 2020 ಮತ್ತು 2022ರಲ್ಲಿ ಕೂಡ ‘ವರ್ಷದ ಅಥ್ಲೀಟ್’ ಪ್ರಶಸ್ತಿ ಪಡೆದಿದ್ದ ಅವರು, ಮತ್ತೊಮ್ಮೆ ತಮ್ಮ ಪ್ರದರ್ಶನದಿಂದ ವಿಶ್ವವನ್ನು ಮರುಗಿಸಿದ್ದಾರೆ.
* ಮಹಿಳೆಯರ ವಿಭಾಗ ಸಿಡ್ನಿ ಮಕ್‌ಲಾಫ್ಲಿನ್–ಲೆವೊನ್ (ಅಮೆರಿಕಾ- 26 ವರ್ಷ)
- 400 ಮೀ. ಓಟ ಮತ್ತು 400 ಮೀ. ಹರ್ಡಲ್ಸ್ ಎರಡರಲ್ಲೂ ವಿಶ್ವ ಮಟ್ಟದ ತಾರೆ. 2025ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 400 ಮೀ. ಮತ್ತು 400 ಮೀ. ಹರ್ಡಲ್ಸ್ ಎರಡರಲ್ಲೂ ಚಿನ್ನ ಗೆದ್ದ ಮೊದಲ ಮಹಿಳೆ ಎಂಬ ಇತಿಹಾಸ ನಿರ್ಮಿಸಿದರು.
- ಕಳೆದ ಎರಡು ವರ್ಷಗಳಲ್ಲಿ ಭಾಗವಹಿಸಿದ ಎಲ್ಲ ಸ್ಪರ್ಧೆಗಳಲ್ಲೂ ಚಿನ್ನ ಜಯಿಸಿದ್ದು ಅಪರೂಪದ ಸಾಧನೆ. ಮಹಿಳಾ ವಿಭಾಗದ ‘ಟ್ರಾಕ್ ಅವಾರ್ಡ್’ ಗೌರವಕ್ಕೂ ಆಯ್ಕೆಯಾಗಿದ್ದಾರೆ.
* ಪುರುಷರ ‘ಟ್ರಾಕ್ ಅವಾರ್ಡ್’ : ಕೆನ್ಯಾದ ಇಮಾನ್ಯುಯೆಲ್ ವಾನ್ನೋನಿ 2025ರ ಪುರುಷರ ಟ್ರಾಕ್ ವಿಭಾಗದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
* ಈ ವರ್ಷದ ಪ್ರಶಸ್ತಿ ವಿಜೇತರ ಸಾಧನೆಗಳು ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಹೊಸ ಮಾನದಂಡಗಳನ್ನು ನಿರ್ಮಿಸಿದ್ದು, ವೇಗ, ಸಾಮರ್ಥ್ಯ ಮತ್ತು ನಿರಂತರ ಪರಿಶ್ರಮಕ್ಕೆ ಮಾದರಿಯಾಗಿ ನಿಲ್ಲುತ್ತಿವೆ
ಬುಧವಾರ, 03 ಡಿಸೆಂಬರ್ 2025
1:54 ಅಪರಾಹ್ನ
Daily PDF
2025ರ ವಿಶ್ವ ಅಥ್ಲೀಟ್ ಪ್ರಶಸ್ತಿ: ಡುಪ್ಲಾಂಟಿಸ್ ಮತ್ತು ಲೆವೊನ್ಗೆ ಜಾಗತಿಕ ಗೌರವ
Authored by:
Akshata Halli