* ಭಾರತದಲ್ಲಿ ಆತ್ಮಹತ್ಯೆಯ ಪ್ರಮಾಣ 1 ಲಕ್ಷಕ್ಕೆ 12.4 ಆಗಿದ್ದು,ಭಾರತದಲ್ಲಿಇದುವರೆಗಿನ ಗರಿಷ್ಟವಾಗಿದೆ. ಭಾರತದಲ್ಲಿ 2022 ರಲ್ಲಿ 1.71 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂಬ ಮಾಹಿತಿ ಏಪ್ರಿಲ್ ನಲ್ಲಿ ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯುರೋ ಅಂಕಿ-ಅಂಶದಲ್ಲಿ ವರದಿ ಮಾಡಿದೆ.* 2022 ರ ಸಮಯದಲ್ಲಿ ಆತ್ಮಹತ್ಯೆಗಳು 2018 ಕ್ಕೆ ಹೋಲಿಸಿದರೆ 27% ರಷ್ಟು ಹೆಚ್ಚಾಗಿದೆ ಮತ್ತು ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಆತ್ಮಹತ್ಯೆಗಳನ್ನು ವರದಿ ಮಾಡಿದೆ. * 1990ರಲ್ಲಿ ಮಹಿಳೆಯರಲ್ಲಿ 25.3% ರಿಂದ 2016 ರಲ್ಲಿ 36.6% ಕ್ಕೆ ಮತ್ತು ಪುರುಷರಲ್ಲಿ 18.7% ರಿಂದ 24.3% ಕ್ಕೆ ಏರಿತು.* ಖಿನ್ನತೆ, ಉದ್ಯೋಗ, ಆರ್ಥಿಕ, ಸಂಬಂಧ ಹಾಗೂ ಆರೋಗ್ಯ ಕುರಿತ ಸಮಸ್ಯೆಗಳ ಒತ್ತಡದಿಂದಾಗಿ ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ನವದೆಹಲಿ ಗಂಗಾರಾಂ ಆಸ್ಪತ್ರೆಯ ಸೈಕಿಯಾಟ್ರಿ ಆ್ಯಂಡ್ ಬಿಹೇವಿಯರಲ್ ಸೈನ್ಸ್ ಸಂಸ್ಥೆ ಉಪಾಧ್ಯಕ್ಷ ರಾಜೀವ್ ಮೆಹ್ರಾ ತಿಳಿಸಿದ್ದಾರೆ.* ಭಾರತದಲ್ಲಿ ಆತ್ಮಹತ್ಯೆ ಯುವಕರಲ್ಲಿ ಅತಿದೊಡ್ಡ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ. ಒಂಟಿತನ ಕೂಡ ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿದೆ ಎಂದು ಸೈಕಿಯಾಟ್ರಿಸ್ಟ್ ಶ್ಯಾಂ ಭಟ್ ತಿಳಿಸಿದ್ದಾರೆ. * ಯಾವ ವ್ಯಕ್ತಿಯಾದರೂ ಮಂಕಾಗಿದ್ದರೆ, ಇಲ್ಲವೇ ಖಿನ್ನತೆಯಿಂದ ಬಳಲುತ್ತಿದ್ದರೆ ಅವರನ್ನು ಹುರಿದುಂಬಿಸಿ. ಸೂಕ್ತ ಮಾರ್ಗದರ್ಶನ ಮತ್ತು ಚಿಕಿತ್ಸೆ ನೀಡಬಲ್ಲ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಲು ಅವರನ್ನು ಉತ್ತೇಜಿಸಿ ಎಂದು ಸೈಕಿಯಾಟ್ರಿಸ್ಟ್ ಶ್ಯಾಂ ಭಟ್ ಅವರು ತಿಳಿಸಿದ್ದಾರೆ.