➤ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಮಾರ್ಚ್ 15 ರಿಂದ ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್‌ಗೆ ಎರಡು ದಿನಗಳ ಅಧಿಕೃತ ಭೇಟಿ ನೀಡಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ (ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವೆ) ಉದ್ವಿಗ್ನತೆ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಈ ಭೇಟಿಯು ಜಾಗತಿಕ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.➤ ಪ್ರಮುಖ ಭೇಟಿಗಳು ಮತ್ತು ಕಾರ್ಯಸೂಚಿ: ಯೂರೋಪಿಯನ್ ಒಕ್ಕೂಟದ ವಿದೇಶಾಂಗ ವ್ಯವಹಾರಗಳ ಮತ್ತು ಭದ್ರತಾ ನೀತಿಯ ಉನ್ನತ ಪ್ರತಿನಿಧಿ ಕಾಜಾ ಕಲ್ಲಾಸ್ ಅವರ ಆಹ್ವಾನದ ಮೇರೆಗೆ ಜೈಶಂಕರ್ ಅವರು ಈ ಭೇಟಿ ಕೈಗೊಂಡಿದ್ದಾರೆ.- EU ವಿದೇಶಾಂಗ ವ್ಯವಹಾರಗಳ ಮಂಡಳಿ: 27 ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರೊಂದಿಗೆ ಜೈಶಂಕರ್ ಸಂವಾದ ನಡೆಸಲಿದ್ದಾರೆ.- ದ್ವಿಪಕ್ಷೀಯ ಸಭೆಗಳು: ಬೆಲ್ಜಿಯಂನ ವಿದೇಶಾಂಗ ಸಚಿವರು ಹಾಗೂ EU ನಾಯಕತ್ವದೊಂದಿಗೆ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ.- ಪಶ್ಚಿಮ ಏಷ್ಯಾ ಬಿಕ್ಕಟ್ಟು: ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕ ಇಂಧನ ಭದ್ರತೆ ಮತ್ತು ಸಮುದ್ರ ಮಾರ್ಗಗಳ ಸುರಕ್ಷತೆಯ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದೆ. ಪ್ರವಾಸಕ್ಕೂ ಮುನ್ನ ಜೈಶಂಕರ್ ಅವರು ಸೌದಿ ಅರೇಬಿಯಾ ಮತ್ತು ಯುಎಇ ವಿದೇಶಾಂಗ ಸಚಿವರೊಂದಿಗೆ ಈ ಬಗ್ಗೆ ದೂರವಾಣಿ ಮಾತುಕತೆ ನಡೆಸಿದ್ದರು.➤ ಎಲ್ಲ ಒಪ್ಪಂದಗಳ ತಾಯಿ’: ಮುಕ್ತ ವ್ಯಾಪಾರ ಒಪ್ಪಂದ (FTA): ವ್ಯಾಪಾರ ಒಪ್ಪಂದಕ್ಕೆ (Free Trade Agreement - FTA) ಸಹಿ ಹಾಕಲಾಗಿತ್ತು. ಈ ಒಪ್ಪಂದವನ್ನು ಕೇಂದ್ರ ಸರ್ಕಾರ "ಎಲ್ಲಾ ಒಪ್ಪಂದಗಳ ತಾಯಿ" (Mother of all agreements) ಎಂದು ಬಣ್ಣಿಸಿದೆ.- ಬೃಹತ್ ಮಾರುಕಟ್ಟೆ: ಇದು ಸುಮಾರು 200 ಕೋಟಿ ಜನಸಂಖ್ಯೆಯನ್ನು ಒಳಗೊಂಡ ಮಾರುಕಟ್ಟೆಯನ್ನು ಸೃಷ್ಟಿಸುತ್ತದೆ.- ತೆರಿಗೆ ಕಡಿತ: ಭಾರತೀಯ ಜವಳಿ, ಚರ್ಮದ ವಸ್ತುಗಳು ಮತ್ತು ರತ್ನಗಳ ಮೇಲೆ EU ವಿಧಿಸುತ್ತಿದ್ದ ಶೇ. 12-17 ರಷ್ಟು ಆಮದು ಸುಂಕಗಳು ಶೂನ್ಯಕ್ಕೆ ಇಳಿಯಲಿವೆ. ಹಾಗೆಯೇ, ಐರೋಪ್ಯ ರಾಷ್ಟ್ರಗಳ ಕಾರುಗಳು ಮತ್ತು ವೈನ್ ಮೇಲಿನ ಸುಂಕವನ್ನು ಭಾರತ ಹಂತ ಹಂತವಾಗಿ ಕಡಿಮೆ ಮಾಡಲಿದೆ.G- DP ಮೇಲೆ ಪ್ರಭಾವ: ಜಾಗತಿಕ GDPಯ ಶೇ. 25 ರಷ್ಟು ಭಾಗವನ್ನು ಈ ಒಪ್ಪಂದವು ಪ್ರತಿನಿಧಿಸುತ್ತದೆ.➤ ಸದ್ಯ ಅಂತಿಮಗೊಂಡಿರುವ FTA ಒಪ್ಪಂದವು ಕಾನೂನುಬದ್ಧ ಪರಿಶೀಲನೆ ಮತ್ತು ವಿವಿಧ ಭಾಷೆಗಳಿಗೆ ಅನುವಾದಗೊಳ್ಳುವ ಹಂತದಲ್ಲಿದೆ. ಇದು ಜನವರಿ 2027 ರಿಂದ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರುವ ನಿರೀಕ್ಷೆಯಿದೆ.