* ದೇಶದಲ್ಲೇ ಮೊದಲ ಬಾರಿಗೆ ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್ ಅವರು ವಿಧವೆಯರ ಜೀವನ ಮಟ್ಟವನ್ನು ಸುಧಾರಿಸಲು ಮತ್ತು ಅವರ ಘನತೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರವು ಜಾರ್ಖಂಡ್ ವಿಧವಾ ಪುನರ್ವಿವಾಹ ಪ್ರೊತ್ಸಾಹ ಯೋಜನೆಯನ್ನು ಪ್ರಾರಂಭಿಸಿದರು.* ಇದರ ಅಡಿಯಲ್ಲಿ ಮಹಿಳೆಯರು ಗಂಡನ ಮರಣದ ನಂತರ ಮತ್ತೆ ಮದುವೆಯಾಗಲು ನಿರ್ಧರಿಸಿದರು ಸರಕಾರದಿಂದ 2 ಲಕ್ಷ ರೂ.ಗಳ ಪ್ರೋತ್ಸಾಹ ಧನ ಪಡೆಯಲಿದ್ದಾರೆ.* ಈ ಯೋಜನೆಯು ವಿಧವೆಯಆತ್ಮವಿಶ್ವಾಸಕ್ಕೆ ಉತ್ತೇಜನ ನೀಡುತ್ತದೆ. ಯೋಜನೆ ಕುರಿತು ಮಾಹಿತಿ ನೀಡಿದ ಮಹಿಳಾ,ಮಕ್ಕಳ ಮತ್ತು ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿಯಾದ  ಮನೋಜ್‌ಕುಮಾರ್‌ ಅವರು ವಿಧವೆಯರನ್ನು ಗೌರವಯುತವಾಗಿ ಬದುಕಲು ಈ ಯೋಜನೆ ಜಾರಿಗೆ ತಂದರು. * ರಾಂಚಿಯ ತಾನಾ ಭಗತ್ ಒಳಾಂಗಣ ಕ್ರೀಡಾಂಗಣದಲ್ಲಿಮಾರ್ಚ್ 6 ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಯೋಜನೆಯ ಏಳು  ವಿಧವಾ ಪುನರ್ವಿವಾಹ ಫಲಾನುಭವಿಗಳಿಗೆ ಒಟ್ಟು 14 ಲಕ್ಷ ರೂ.ಗಳನ್ನು ವಿತರಿಸಿದರು.