Job Description: * ಭಾರತದಲ್ಲಿ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು 1960 ರಲ್ಲಿ ಜಾರಿಗೆ ತರಲಾಯಿತು. ಇತ್ತೀಚೆಗೆ, ಕೇಂದ್ರ ಸರ್ಕಾರವು ಮಾರ್ಚ್ 27, 2023 ರಂದು ಹೊಸ ನಿಯಮವನ್ನು ಘೋಷಿಸಿತು, ದನಗಳ ಕೊಂಬು ಮತ್ತು ಕ್ಯಾಸ್ಟ್ರೇಶನ್, ಬ್ರ್ಯಾಂಡಿಂಗ್ ಅಥವಾ ಯಾವುದೇ ಪ್ರಾಣಿಯ ಮೂಗು ಕಟ್ಟುವುದು ಸೇರಿದಂತೆ ಹಲವಾರು ಕಾರ್ಯ ವಿಧಾನದಲ್ಲಿ ಪ್ರಾಣಿಗಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ಈ ನಿಯಮ ಘೋಷಿಸಲಾಯಿತು.* ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ತಡೆಗಟ್ಟುವ ಕಾಯಿದೆಯ ಸೆಕ್ಷನ್ 11 ಪ್ರಾಣಿಗಳನ್ನು ದೌರ್ಜನ್ಯದಿಂದ ನಡೆಸಿಕೊಳ್ಳುವಂತಹ ಕೃತ್ಯಗಳನ್ನು ವ್ಯಾಖ್ಯಾನಿಸುತ್ತದೆ, ಈ ಕಾಯಿದೆಯ ಸೆಕ್ಷನ್ 11 ರ ಉಪವಿಭಾಗ 3 ಪಶುಸಂಗೋಪನೆ ಕಾರ್ಯವಿಧಾನಗಳಿಗೆ ವಿನಾಯಿತಿಗಳನ್ನು ಅನುಮತಿಸುತ್ತದೆ.