* 2024ರ ಆಕ್ಸ್‌ಫರ್ಡ್ ಎಕನಾಮಿಕ್ಸ್ ಗ್ಲೋಬಲ್ ಸಿಟೀಸ್ ಇಂಡೆಕ್ಸ್ ನ 1,000 ಜಾಗತಿಕ ನಗರಗಳ ಶ್ರೇಯಾಂಕದಲ್ಲಿ ಭಾರತೀದ ರಾಜಧಾನಿ ದೆಹಲಿ 350 ನೇ ಸ್ಥಾನದಲ್ಲಿದೆ, ಬೆಂಗಳೂರಿಗೆ 411 ನೇ ಸ್ಥಾನ ಪಡೆದುಕೊಂಡಿದೆ. ಅಮೇರಿಕಾದ ನ್ಯೂಯಾರ್ಕ್ ನಗರ ಜಗತ್ತಿನ ಅತ್ಯಂತ ಉತ್ತಮ ನಗರವಾಗಿದೆ. * ಈ ಜಾಗತಿಕ ನಗರ ಸೂಚ್ಯಂಕ ಪಟ್ಟಿಯಲ್ಲಿ ಮುಂಬೈ ಮಹಾನಗರ 427ನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶದಲ್ಲಿ ನೆಲೆಗೊಂಡಿರುವ ಸುಲ್ತಾನ್‌ಪುರ ನಗರವು ಕೊನೆಯ (1,000ನೇ) ಸ್ಥಾನದಲ್ಲಿದೆ.* ಎಕನಾಮಿಕ್ಸ್ ಗ್ಲೋಬಲ್ ಸಿಟೀಸ್ ಇಂಡೆಕ್ಸ್ ಜಗತ್ತಿನ ನಗರಗಳ ಐದು ವಿಷಯಗಳ ಕುರಿತು ಎಲ್ಲ ಮಾಹಿತಿಯನ್ನು ಒದಗಿಸುತ್ತದೆ. ಆರ್ಥಿಕತೆ, ಮಾನವ ಸಂಪನ್ಮೂಲ, ಜೀವನ ಗುಣಮಟ್ಟ, ಪರಿಸರ ಮತ್ತು ಆಡಳಿತ ಈ ವಿಭಾಗಗಳಲ್ಲಿ ಕ್ರೋಢೀಕೃತ ಅಂಕಗಳನ್ನು ಪರಿಗಣಿಸಿ ಪ್ರತಿಯೊಂದು ನಗರದ ಒಟ್ಟಾರೆ ರ‍್ಯಾಂಕಿಂಗ್ ನ್ನು ನಿರ್ಧರಿಸಲಾಗುತ್ತದೆ.* ದೆಹಲಿ ನಗರ ಮಾನವ ಸಂಪನ್ಮೂಲ ವಿಭಾಗದಲ್ಲಿ 55ನೇ ಸ್ಥಾನ ಹಾಗೂ ಆರ್ಥಿಕ ಕ್ಷೇತ್ರದಲ್ಲಿ 108ನೇ ಸ್ಥಾನ ಪಡೆದಿದೆ.* ಜಾಗತಿಕ ನಗರ ಸೂಚ್ಯಂಕದ ಅಗ್ರ 10 ನಗರಗಳು: - ನ್ಯೂಯಾರ್ಕ್ (ಯುನೈಟೆಡ್ ಸ್ಟೇಟ್ಸ್) - ಲಂಡನ್ (ಯುನೈಟೆಡ್ ಕಿಂಗ್ಡಂ) - ಸ್ಯಾನ್ ಜೋಸ್ (ಯುನೈಟೆಡ್ ಸ್ಟೇಟ್ಸ್) - ಟೋಕಿಯೋ (ಜಪಾನ್)- ಪ್ಯಾರಿಸ್ (ಫ್ರಾನ್ಸ್) - ಸಿಯಾಟಲ್ (ಯುನೈಟೆಡ್ ಸ್ಟೇಟ್ಸ್) - ಲಾಸ್ ಏಂಜಲೀಸ್ (ಯುನೈಟೆಡ್ ಸ್ಟೇಟ್ಸ್) - ಸ್ಯಾನ್ ಫ್ರಾನ್ಸಿಸ್ಕೋ (ಯುನೈಟೆಡ್ ಸ್ಟೇಟ್ಸ್) - ಮೆಲ್ಬೋರ್ನ್ (ಆಸ್ಟ್ರೇಲಿಯಾ)- ಜ್ಯೂರಿಚ್ (ಸ್ವಿಟ್ಜರ್ಲೆಂಡ್)
* ಜಾಗತಿಕ ನಗರ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತೀಯ ನಗರಗಳು : - 350: ನವದೆಹಲಿ- 411: ಬೆಂಗಳೂರು - 427: ಮುಂಬೈ - 472: ಚೆನ್ನೈ - 521: ಕೊಚ್ಚಿ - 528: ಕೋಲ್ಕತ್ತಾ - 534: ಪುಣೆ - 550: ತ್ರಿಶೂರ್ - 564: ಹೈದರಾಬಾದ್ - 580: ಕೋಝಿಕ್ಕೋಡ್