Job Description: * ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಬೃಹತ್ ಎಲ್‌ವಿಎಂ3-ಎಂ3 ರಾಕೆಟ್ ಬ್ರಿಟನ್ ಮೂಲದ ಒನ್‌ವೆಬ್ ಗ್ರೂಪ್ ಸಂಸ್ಥೆಯ 36 ಉಪಗ್ರಹಗಳನ್ನು ಏಪ್ರಿಲ್ 2 ರಂದು ಯಶಸ್ವಿಯಾಗಿ ಕಕ್ಷೆಗೆ ತಲುಪಿಸಿತು.* ಎಲ್‌ವಿಎಂ3-ಎಂ3/ಒನ್ ವೆಬ್ ಇಂಡಿಯ-2 ಎಂದು ಈ ಯೋಜನೆಯನ್ನು ಕರೆಯಲಾಗಿದೆ. ಉಪಗ್ರಹಗಳನ್ನು ಹೊತ್ತ ರಾಕೆಟ್ ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 9 ಗಂಟೆಗೆ ಉಡಾವಣೆಗೊಂಡಿತು. ಸಿಬ್ಬಂದಿ ಸಹಿತ 'ಗಗನಯಾನ' ಯೋಜನೆಗೆ ಬಳಸಿರುವ ತಾಂತ್ರಿಕ ಸಂಯೋಜನೆಯನ್ನೇ ಈ ರಾಕೆಟ್‌ನಲ್ಲಿಯೂ ಬಳಸಲಾಗಿದೆ. * ಒಟ್ಟು 5,805 ಕೆ.ಜಿ. ತೂಕವಿದ್ದ ಉಪಗ್ರಹಗಳನ್ನು ಸುಮಾರು 9 ನಿಮಿಷದಲ್ಲಿ 450 ಕಿ.ಮೀ. ಎತ್ತರಕ್ಕೆ ಈ ರಾಕೆಟ್ ಹೊತ್ತೊಯ್ದಿದೆ.* ಇಸ್ರೋದ ವಾಣಿಜ್ಯ ಉದ್ದೇಶದ ಘಟಕ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್‌ನ (NSIL) ಎರಡನೇ ಯೋಜನೆ ಇದಾಗಿದೆ. ಬ್ರಿಟನ್‌ನ ಒನ್‌ವೆಬ್ ಗ್ರೂಪ್ ಕಂಪನಿಗೆ ಒಳಪಟ್ಟ ನೆಟ್‌ವರ್ಕ್ ಆ್ಯಕ್ಸೆಸ್ ಅಸೋಸಿಯೇಟ್ಸ್ ಲಿಮಿಟೆಡ್ ಜೊತೆ 72 ಉಪಗ್ರಹಗಳನ್ನು ಉಡಾವಣೆ ಮಾಡುವ ನಿಟ್ಟಿನಲ್ಲಿ ಇನ್ನೊ ಒಪ್ಪಂದ ಮಾಡಿಕೊಂಡಿತ್ತು. * ಮೊದಲ ಗುಂಪಿನ 36 ಉಪಗ್ರಹಗಳನ್ನು 2022ರ ಅಕ್ಟೋಬರ್ 23ರಂದು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿತ್ತು. ಎರಡನೇ ಗುಂಪಿನ ಉಪಗ್ರಹಗಳ ಉಡಾವಣೆಯನ್ನು ಭಾನುವಾರ ಮಾಡಲಾಗಿದೆ.