*  ಮಾರ್ಚ್ 27 ರಂದು ರಾಜೀವ್‌ ಗಾಂಧಿ ಇಂಟರ್‌ನ್ಯಾಷನಲ್‌ ಸ್ಟೇಡಿಯಂನಲ್ಲಿ ನಡೆದ 17ನೇ ಆವೃತ್ತಿಯ ಐಪಿಎಲ್ನ ಒಂಬತ್ತನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ಸುನಾಮಿ ಬ್ಯಾಟಿಂಗ್ ನಡೆಸಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್  ದಾಖಲೆಗಳು ಧೂಳೀಪಟಗೊಂಡಿದೆ. * ಮುಂಬೈ ಇಂಡಿಯನ್ಸ್ ವಿರುದ್ಧ 277 ರನ್ ಸಿಡಿಸಿ ಸನ್ರೈಸರ್ಸ್ ಹೈದರಾಬಾದ್ ಐಪಿಎಲ್ನಲ್ಲಿ ಹೊಸ ದಾಖಲೆ ಬರೆದಿದೆ. IPL ಲೀಗ್ ಇತಿಹಾಸದಲ್ಲೇ ಅತ್ಯಧಿಕ ರನ್ ಗಳಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. * ಆರ್‌ಸಿಬಿ ತಂಡ 2013ರ ಏಪ್ರಿಲ್‌ 23 ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪುಣೆ ವಾರಿಯರ್ಸ್‌ ತಂಡದ ವಿರುದ್ಧ 5 ವಿಕೆಟ್‌ಗೆ 263 ರನ್‌ ಬಾರಿಸಿದ್ದು ಈವರೆಗಿನ ಐಪಿಎಲ್‌ ದಾಖಲೆಯಾಗಿತ್ತು.  11 ವರ್ಷಗಳ ಹಿಂದೆ ಆರ್ಸಿಬಿ 263 ರನ್ ಗಳಿಸುವ ಮೂಲಕ ದಾಖಲೆಯನ್ನು ನಿರ್ಮಿಸಿತ್ತು. * ಎಸ್ಆರ್ಹೆಚ್ 10 ಓವರ್ಗಳಲ್ಲಿ ಗರಿಷ್ಠ ಮೊತ್ತ ದಾಖಲಿಸಿದೆ. 2 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿದ್ದು, ಐಪಿಎಲ್ ಇತಿಹಾಸದಲ್ಲೇ 10 ಓವರ್ಗಳಲ್ಲಿ ಅಧಿಕ ಮೊತ್ತ ಕಲೆಹಾಕಿದ ಪ್ರಥಮ ತಂಡ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೂ ಮುನ್ನ ಈ ಸಾಧನೆ ಮುಂಬೈ ಇಂಡಿಯನ್ಸ್ ಹೆಸರಿನಲ್ಲಿತ್ತು. 2021ರಲ್ಲಿ ಹೈದರಾಬಾದ್ ಎದುರು 3 ವಿಕೆಟ್ ನಷ್ಟಕ್ಕೆ 131 ರನ್ ಗಳಿಸತ್ತು. * ಹೆನ್ರಿಚ್ ಕ್ಲಾಸೆನ್ ಅವರು 34 ಎಸೆತದಲ್ಲಿ 80 ರನ್ ಸಿಡಿಸಿದರು, ಅಭಿಷೇಕ್ ಶರ್ಮಾ 63, ಟ್ರಾವಿಸ್ ಹೆಡ್ 62, ಮತ್ತು ಏಡನ್ ಮಾರ್ಕ್ರಮ್ 42 ರನ್ನ ಸಿಡಿಸುವ ಮೂಲಕ ದಾಖಲೆಗಳನ್ನು ನಿರ್ಮಾಣ ಮಾಡಿದ್ದಾರೆ.