* 2024ರ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ದುಬೈನಲ್ಲಿ ನಡೆಯುತ್ತಿದೆ. ಆಸ್ಟ್ರೇಲಿಯಾದ ಕ್ರಿಕೆಟಿಗ ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ಮಿ 2024ರ ಐಪಿಎಲ್ ಹರಾಜಿನಲ್ಲಿ  ಬರೋಬ್ಬರಿ 24.75 ಕೋಟಿ ರೂ ಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಾಗಿ ಐಪಿಎಲ್ ದಾಖಲೆ ಬರೆದರು. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇದುವರೆಗೆ ಮಾಡಿದ ಅತ್ಯಂತ ದುಬಾರಿ ಖರೀದಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.* 2023ರ ವಿಶ್ವಕಪ್ನಲ್ಲಿ ಭರ್ಜರಿ ಬೌಲಿಂಗ್ ಮಾಡಿದ್ದ ಮಿಚೆಲ್ ಸ್ಟಾರ್ಕ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ ರನ್ ಬಿಟ್ಟುಕೊಡುವಲ್ಲಿಯು ಬ್ಯಾಟ್ಸ್ಮನ್ಗಳಿಗೆ ಕಡಿವಾಣ ಹಾಕಿದ್ದರು. ಈ ಎಲ್ಲವನ್ನು ಗಣನೆಗೆ ತೆಗೆದುಕೊಂಡಿರುವ ಫ್ರಾಂಚೈಸಿಗಳು ಮಿಚೆಲ್ ಸ್ಟಾರ್ಕ್ ಖರೀದಿಗೆ ಮುಗಿ ಬಿದ್ದಿದರು. ಆದರೆ ಕೊನೆಗೆ ಕೋಲ್ಕತ್ತ ನೈಟ್ ರೈಡರ್ಸ್ ಫ್ರಾಂಚೈಸಿ 24.75 ಕೋಟಿ ರೂಪಾಯಿಗಳನ್ನ ಕೂಗಿ ಖರೀದಿ ಮಾಡಿದೆ ಎಂದು ಹೇಳಲಾಗಿದೆ. * ಇಡೀ ಐಪಿಎಲ್ನಲ್ಲೇ ದುಬಾರಿ ಬೆಲೆಗೆ ಮಾರಾಟವಾದ ಆಟಗಾರ ಎಂಬ ಖ್ಯಾತಿಗೆ ಮಿಚೆಲ್ ಸ್ಟಾರ್ಕ್ ಪಾತ್ರರಾಗಿದ್ದಾರೆ. RCB ಟೀಮ್ನಲ್ಲಿ ಈ ಹಿಂದೆ ಮಿಚೆಲ್ ಸ್ಟಾರ್ಕ್ ಆಡಿದ್ದರು.* ಆಟಗಾರ ಶಿವನ್ ಮಾವಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಾಲಾಗಿದ್ದು, ಅವ್ರನ್ನ 6 ಕೋಟಿ 40 ಲಕ್ಷಕ್ಕೆ ಖರೀದಿಸಿದೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 11.5 ಕೋಟಿ ರೂ.ಗೆ ಅಲ್ಜಾರಿ ಜೋಸೆಫ್ ಖರೀದಿಸಿದೆ. ಇದಕ್ಕೂ ಮುನ್ನ ಉಮೇಶ್ ಯಾದವ್ ಅವರನ್ನ ಗುಜರಾತ್ ಟೈಟಾನ್ಸ್ 5 ಕೋಟಿ 80 ಲಕ್ಷ ರೂ.ಗೆ ಖರೀದಿಸಿದೆ. * ಎರಡನೇ ಸುತ್ತಿನ ಹರಾಜಿನಲ್ಲಿ ಪ್ಯಾಟ್ ಕಮಿನ್ಸ್ ಅವರನ್ನ ಸನ್ರೈಡರ್ಸ್ ಹೈದರಾಬಾದ್ 20 ಕೋಟಿ 50 ಲಕ್ಷ ರೂ.ಗೆ ಖರೀದಿಸಿತು. ಹರ್ಷಲ್ ಪಟೇಲ್ ಅವರನ್ನ ಪಂಜಾಬ್ 11 ಕೋಟಿ 75 ಲಕ್ಷ ರೂ.ಗೆ ಖರೀದಿಸಿದರೆ, ಡ್ಯಾರೆಲ್ ಮಿಚೆಲ್ ಅವರನ್ನ ಚೆನ್ನೈ ಸೂಪರ್ ಕಿಂಗ್ಸ್ 14 ಕೋಟಿ ರೂ.ಗೆ ಖರೀದಿಸಿದೆ.