* ಸ್ಪೇನಿನ 22 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ವಿಜೇತ, ಟೆನಿಸ್ ದಿಗ್ಗಜ ರಫೆಲ್‌ ನಡಾಲ್‌(Rafael Nadal) ಅವರು ಭಾರತದ ಎರಡನೇ ಅತಿದೊಡ್ಡ ಐಟಿ ಸಂಸ್ಥೆ ಇನ್ಫೋಸಿಸ್(Infosys) ಬ್ರ್ಯಾಂಡ್‌ ಅಂಬಾಸಿಡರ್(global ambassador) ಆಗಿ ನೇಮಕ ಮಾಡಲಾಗಿದೆ.* ಮುಂದಿನ ಮೂರು ವರ್ಷಗಳ ಕಾಲ ನಡಾಲ್ ಅವರು ಇನ್ಫೋಸಿಸ್ನ ಬ್ರ್ಯಾಂಡ್‌ ಅಂಬಾಸಿಡರ್ ಆಗಿರಲಿದ್ದಾರೆ. “ವಿಶ್ವದ ಅತ್ಯಂತ ಶ್ರೇಷ್ಠ ಮತ್ತು ಗೌರವಾನ್ವಿತ ಟೆನಿಸ್ ಚಾಂಪಿಯನ್ ಆಗಿರುವ ರಫೆಲ್‌ ನಡಾಲ್‌ ಅವರನ್ನು ಇನ್ಫೋಸಿಸ್‌ನ ರಾಯಭಾರಿಯಾಗಿ ಸ್ವಾಗತಿಸಲು ಹೆಮ್ಮೆಯಾಗುತ್ತಿದೆ” ಎಂದು ಸಲೀಲ್ ಪರೇಖ್ ಹೇಳಿದ್ದಾರೆ.