* ಭಾರತೀಯ ರೇಡಿಯೊ ಸೇವೆಗಳಲ್ಲಿ 'ಆಲ್ ಇಂಡಿಯಾ ರೇಡಿಯೊ' (ಎಐಆರ್) ಬದಲು “ಆಕಾಶವಾಣಿ' ಎಂದು ಉಲ್ಲೇಖಿಸಲು ನಿರ್ಧರಿಸಲಾಗಿದ್ದು, ಎಐಆರ್ ಅನ್ನು ಆಕಾಶವಾಣಿ ಎಂದು ಬದಲಿಸಿರುವ ಶಾಸನಬದ್ಧ ನಿಬಂಧನೆಜಾರಿಯಾಗಬೇಕು ಎಂದು ಆಕಾಶವಾಣಿ ಮಹಾನಿರ್ದೇಶಕಿಯಾದ ವಸುಧಾ ಗುಪ್ತಾ ರವರು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.* ಎಐಆರ್‌ಗೆ 'ಆಕಾಶವಾಣಿ' ಎಂದು ಖ್ಯಾತ ಕವಿಗಳಾದ ರವೀಂದ್ರನಾಥ ಠಾಗೋರರು ರವರು 1939ರಲ್ಲಿ ಕಲ್ಕತ್ತಾ ಶಾರ್ಟ್‌ವೇವ್‌ ರೇಡಿಯೋ ಕೇಂದ್ರದ ಉದ್ಘಾಟನೆ ವೇಳೆ ಸಂಬೋಧಿಸಿದ್ದು, ಇದಕ್ಕೂ ಮುನ್ನ 1935 ರಲ್ಲಿ ಸೆಪ್ಟೆಂಬರ್ 10ರಂದು 'ಆಕಾಶವಾಣಿ ಮೈಸೂರು' ಎಂಬ ಖಾಸಗಿ ರೇಡಿಯೋ ಕೇಂದ್ರ ಆರಂಭವಾಗಿತ್ತು.