* ಸೂರ್ಯನ ಕಿರಣಗಳು ನೆತ್ತಿಯ ಮೇಲೆ ಬೀಳುವಾಗ ಅಂದರೆ ಸರಿಸುಮಾರು ಮದ್ಯಾಹ್ನದ ವೇಳೆಗೆ (12. 17 ರಿಂದ 12.33 ರ ವರೆಗೆ) ಈ ಘಟನೆ ಸಂಭವಿಸಲಿದೆ. ಈ ಸಮಯದಲ್ಲಿ ಝೀರೋ ಶ್ಯಾಡೋ ಡೇ ಕುತೂಹಲಕಾರಿ ಖಗೋಳ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ * ಭೂಮಿಯ ಮೇಲೆ ವರ್ಷದಲ್ಲಿ 2 ಅವಧಿಯಂತೆ  ಉತ್ತರಾಯಣ ಮತ್ತು ಒಮ್ಮೆ ದಕ್ಷಿಣಾಯಣ ಅವಧಿಯಂತೆ  ಎರೆಡೆರಡು ಬಾರಿ ಶೂನ್ಯ ನೆರಳು ಆವರಿಸುತ್ತದೆ. ಈ ದಿನ ಭೂಮಿಯ ಮೇಲ್ಮೈನಲ್ಲಿ ಯಾವುದೇ ಲಂಬ ವಸ್ತುವಿನ ನೆರಳು ಕಾಣುವುದಿಲ್ಲ. ಈ ದಿನ  ಸೂರ್ಯನು ಮಧ್ಯಾಹ್ನದ ಸಮಯದಲ್ಲಿ ನಿಖರವಾಗಿ ನಮ್ಮ ನೆತ್ತಿಯ ಮೇಲೆ ಇರುವುದಿಲ್ಲ. * ಸೂರ್ಯನು ಆಕಾಶದಲ್ಲಿ ತನ್ನ ಅತ್ಯುನ್ನತ ಬಿಂದು ಅಥವಾ ಉತ್ತೋಂಗವನ್ನು ತಲಪುತ್ತಾನೆ ಮತ್ತು ನೆರಳಿನ ಉದ್ದವು ಅದನ್ನು ನೋಡಲಾಗದಷ್ಟು ಕಡಿಮೆ ಆಗುತ್ತದೆ ಹಾಗೂ ಉಡುಪಿ, ಬೆಂಗಳೂರ ಸೇರಿದಂತೆ ರಾಜ್ಯದಲ್ಲಿ ಹಲವು ಕಡೆ ಶೂನ್ಯ ನೆರಳಿನ ವಿಸ್ಮಯ ನಡೆಯಲಿದೆ.