➤ ಭಾರತ ಮತ್ತು ಮಲೇಷ್ಯಾ ನಡುವಿನ ಐತಿಹಾಸಿಕ ಸಂಬಂಧಕ್ಕೆ ಈಗ ಹೊಸ ಆಯಾಮ ದೊರೆತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ (ಫೆಬ್ರವರಿ 7-8, 2026) ಅಧಿಕೃತ ಮಲೇಷ್ಯಾ ಭೇಟಿಯ ವೇಳೆ, ಉಭಯ ದೇಶಗಳು ರಕ್ಷಣೆ, ಭದ್ರತೆ ಮತ್ತು ಡಿಜಿಟಲ್ ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರ ನೀಡಲು ಆರು ಪ್ರಮುಖ ಒಪ್ಪಂದಗಳಿಗೆ (MoU) ಸಹಿ ಹಾಕಿವೆ. ಫೆಬ್ರವರಿ 8, 2026 ರಂದು ಪುತ್ರಜಯದಲ್ಲಿ (ಮಲೇಷ್ಯಾ ) ನಡೆದ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು 2024ರ 'ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ'ಯನ್ನು ಬಲಪಡಿಸುವ ಮೂಲಕ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಬಾಂಧವ್ಯದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದರು.➤ ಪ್ರಮುಖ ಆರು ಒಪ್ಪಂದಗಳು:1. ರಕ್ಷಣೆ ಮತ್ತು ಭದ್ರತೆ: ಭಯೋತ್ಪಾದನೆ ನಿಗ್ರಹ, ಗುಪ್ತಚರ ಮಾಹಿತಿ ಹಂಚಿಕೆ ಮತ್ತು ಕಡಲ ಭದ್ರತೆಯಲ್ಲಿ ಸಹಕಾರವನ್ನು ವಿಸ್ತರಿಸಲು ಉಭಯ ದೇಶಗಳು ನಿರ್ಧರಿಸಿದ್ದು, ಇದರ ಭಾಗವಾಗಿ 'Su-30 ಫೋರಂ' ಸ್ಥಾಪನೆ ಹಾಗೂ 'ಹರಿಮೌ ಶಕ್ತಿ' ಜಂಟಿ ಸಮರಾಭ್ಯಾಸವನ್ನು ಮುಂದುವರಿಸುವ ಮೂಲಕ ರಕ್ಷಣಾ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಿವೆ.2. ಡಿಜಿಟಲ್ ಮತ್ತು ಸೆಮಿಕಂಡಕ್ಟರ್: ಭಾರತ-ಮಲೇಷ್ಯಾ ಡಿಜಿಟಲ್ ಕೌನ್ಸಿಲ್ (MIDC) ಸ್ಥಾಪನೆ ಹಾಗೂ IIT-ಮದ್ರಾಸ್ ಮತ್ತು ಮಲೇಷ್ಯಾದ ಸುಧಾರಿತ ಸೆಮಿಕಂಡಕ್ಟರ್ ಅಕಾಡೆಮಿ ನಡುವಿನ ಒಪ್ಪಂದವು ಉಭಯ ದೇಶಗಳ ಡಿಜಿಟಲ್ ಆರ್ಥಿಕತೆ ಮತ್ತು ಸೆಮಿಕಂಡಕ್ಟರ್ ಪೂರೈಕೆ ಸರಪಳಿಯನ್ನು ಬಲಪಡಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ. 3. ಆರ್ಥಿಕತೆ ಮತ್ತು ವ್ಯಾಪಾರ: ಭಾರತ ಮತ್ತು ಮಲೇಷ್ಯಾ ನಡುವಿನ ದ್ವಿಪಕ್ಷೀಯ ವ್ಯಾಪಾರದಲ್ಲಿ ಸ್ಥಳೀಯ ಕರೆನ್ಸಿಗಳ (ರೂಪಾಯಿ ಮತ್ತು ರಿಂಗಿಟ್) ಬಳಕೆಯನ್ನು ಉತ್ತೇಜಿಸಲು ಹಾಗೂ ಯುಪಿಐ ಮಾದರಿಯ ಪಾವತಿಗಾಗಿ NIPL ಮತ್ತು PayNet ನಡುವೆ ಮಹತ್ವದ ಒಪ್ಪಂದ ಮಾಡಿಕೊಳ್ಳಲಾಗಿದೆ.4. ಇಂಧನ ಮತ್ತು ಆರೋಗ್ಯ: ಭಾರತ ಮತ್ತು ಮಲೇಷ್ಯಾ ಗ್ರೀನ್ ಹೈಡ್ರೋಜನ್ ಹಾಗೂ ಸೌರ ಇಂಧನದಂತಹ ನವೀಕರಿಸಬಹುದಾದ ಇಂಧನ ಮೂಲಗಳ ಜೊತೆಗೆ, ಆಯುರ್ವೇದ ಮತ್ತು ಹೋಮಿಯೋಪತಿಯಂತಹ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಸುಸ್ಥಿರ ಭವಿಷ್ಯಕ್ಕಾಗಿ ಕೈಜೋಡಿಸಿವೆ.5. ಶಿಕ್ಷಣ ಮತ್ತು ಸಂಸ್ಕೃತಿ: ಕೌಲಾಲಂಪುರದ ಮಲೇಷ್ಯಾ ವಿಶ್ವವಿದ್ಯಾಲಯದಲ್ಲಿ 'ತಿರುವಳ್ಳುವರ್ ಪೀಠ' ಸ್ಥಾಪನೆ ಮತ್ತು 'ಸ್ಟಡಿ ಇನ್ ಇಂಡಿಯಾ' ಅಡಿಯಲ್ಲಿ ಮಲೇಷ್ಯಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಘೋಷಿಸುವ ಮೂಲಕ ಭಾರತ-ಮಲೇಷ್ಯಾ ನಡುವಿನ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಂಬಂಧವನ್ನು ಮತ್ತಷ್ಟು ವಿಸ್ತರಿಸಲಾಯಿತು.6. ಅಂತರಾಷ್ಟ್ರೀಯ ಸಹಕಾರ: ಅಂತರಾಷ್ಟ್ರೀಯ ಸಹಕಾರ ಮತ್ತು ಸಾಂಸ್ಕೃತಿಕ ವಿನಿಮಯದ ಭಾಗವಾಗಿ, ಮಲೇಷ್ಯಾವು ಭಾರತದ ಬೆಂಬಲದೊಂದಿಗೆ 'ಬಿಗ್ ಕ್ಯಾಟ್ ಅಲಯನ್ಸ್' (IBCA) ಸೇರ್ಪಡೆ ಹಾಗೂ BRICS ಪಾಲುದಾರಿಕೆಯತ್ತ ಹೆಜ್ಜೆ ಇಟ್ಟಿದ್ದರೆ, ಶಿಕ್ಷಣ ಕ್ಷೇತ್ರದಲ್ಲಿ 'ತಿರುವಳ್ಳುವರ್ ಪೀಠ' ಸ್ಥಾಪನೆ ಮತ್ತು 'ಸ್ಟಡಿ ಇನ್ ಇಂಡಿಯಾ' ವಿದ್ಯಾರ್ಥಿವೇತನದ ಮೂಲಕ ಶೈಕ್ಷಣಿಕ ಸಂಬಂಧಗಳನ್ನು ವಿಸ್ತರಿಸಲಾಗಿದೆ.➤ ಕ್ವಾಲಾಲಂಪುರದಲ್ಲಿ ಆಜಾದ್ ಹಿಂದ್ ಫೌಜ್‌ನ ನಿವೃತ್ತ ಯೋಧ ಜಯರಾಜ್ ರಾಜಾ ರಾವ್ ಅವರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ, ಭಾರತದ ಸ್ವಾತಂತ್ರ್ಯ ಮತ್ತು ಭವಿಷ್ಯವನ್ನು ರೂಪಿಸಿದ ನೇತಾಜಿ ಹಾಗೂ ಐಎನ್‌ಎ ಯೋಧರ ಶೌರ್ಯವನ್ನು ಸ್ಮರಿಸಿ ಗೌರವ ಸಲ್ಲಿಸಿದರು.➤ ತಮಿಳು ಭಾಷೆ ಮತ್ತು ಸಂಸ್ಕೃತಿಯಿಂದ ಬೆಸೆದಿರುವ ಭಾರತ-ಮಲೇಷ್ಯಾ ಬಾಂಧವ್ಯವನ್ನು ಸ್ಮರಿಸಿದ ಪ್ರಧಾನಿ ಮೋದಿ, ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಮೇರುನಟ ಎಂ.ಜಿ. ರಾಮಚಂದ್ರನ್ ಅವರ ದೊಡ್ಡ ಅಭಿಮಾನಿಯಾಗಿದ್ದು, ಔತಣಕೂಟದಲ್ಲಿ ಎಂಜಿಆರ್ ಚಿತ್ರದ ಹಾಡನ್ನು ಪ್ರಸ್ತುತಪಡಿಸಿದ ವಿಶೇಷ ಕ್ಷಣವನ್ನು ಹಂಚಿಕೊಂಡಿದ್ದಾರೆ.➤ ಪ್ರಧಾನಿ ಮೋದಿಯವರ ಈ ಭೇಟಿಯು ಕೇವಲ ವ್ಯಾಪಾರಕ್ಕೆ ಸೀಮಿತವಾಗದೆ, ದಕ್ಷಿಣ ಚೀನಾ ಸಮುದ್ರದಲ್ಲಿನ ಸ್ಥಿರತೆ ಮತ್ತು ಇಂಡೋ-ಪೆಸಿಫಿಕ್ ವಲಯದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಭಾರತದ ಪ್ರಭಾವವನ್ನು ಹೆಚ್ಚಿಸಿದೆ. ಉಭಯ ದೇಶಗಳ ನಡುವಿನ 'ಸ್ಥಳೀಯ ಕರೆನ್ಸಿ ವ್ಯಾಪಾರ'ವು ಡಾಲರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ.