Job Description: ➤ ಭಾರತವು ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸುವ 2047ರ ವೇಳೆಗೆ ದೇಶವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ (Developed Country) ಮಾಡಲು ಕೇಂದ್ರ ಸರ್ಕಾರವು ಬೃಹತ್ ನೀಲನಕ್ಷೆಯನ್ನು ಸಿದ್ಧಪಡಿಸಿದೆ. ಈ 'ವಿಕ್ಷಿತ್ ಭಾರತ್ 2047' (Viksit Bharat 2047) ಆರ್ಥಿಕ ದೃಷ್ಟಿಕೋನವನ್ನು ಸಾಕಾರಗೊಳಿಸಲು ಮತ್ತು ಭಾರತವನ್ನು 30 ಟ್ರಿಲಿಯನ್ ಡಾಲರ್ ($30 Trillion) ಆರ್ಥಿಕತೆಯನ್ನಾಗಿ ಪರಿವರ್ತಿಸಲು ಅಂತರರಾಷ್ಟ್ರೀಯ ವ್ಯಾಪಾರ ಸಂಬಂಧಗಳ ವಿಸ್ತರಣೆ ಅತ್ಯಗತ್ಯ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.➤ ಬೆಂಗಳೂರಿನಲ್ಲಿ ನಡೆದ 'ಇಂಡಿಯಾ ಗ್ಲೋಬಲ್ ಇನ್ನೋವೇಶನ್ ಕನೆಕ್ಟ್' (IGIC 2026) ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಜಾಗತಿಕ ಪಾಲುದಾರಿಕೆಗಳು ಭಾರತೀಯ ಕೈಗಾರಿಕೆಗಳೊಂದಿಗೆ ಸ್ಪರ್ಧಿಸುವ ಬದಲು, ಅವುಗಳಿಗೆ ಪೂರಕವಾಗಿ ಕೆಲಸ ಮಾಡಲಿವೆ ಎಂದು ಸ್ಪಷ್ಟಪಡಿಸಿದರು.➤ 2047ರ ಆರ್ಥಿಕ ದೃಷ್ಟಿಕೋನ ಮತ್ತು ಜಾಗತಿಕ ಪಾಲುದಾರಿಕೆ: - ಯುವ ಆಸ್ತಿ ಮತ್ತು ಜಾಗತಿಕ ಬೇಡಿಕೆ: ಪ್ರಸ್ತುತ ಯುರೋಪ್, ಅಮೆರಿಕ, ಕೆನಡಾದಂತಹ ಮುಂದುವರಿದ ದೇಶಗಳು ವಯಸ್ಸಾದ ಜನಸಂಖ್ಯೆಯ (Ageing Population) ಸವಾಲನ್ನು ಎದುರಿಸುತ್ತಿವೆ. ಅವರಿಗೆ ಯುವ ಪ್ರತಿಭೆಗಳು ಮತ್ತು ನುರಿತ ಕಾರ್ಯಪಡೆಯ ಅಗತ್ಯವಿದೆ. ಭಾರತದಲ್ಲಿ ಯುವ ಜನಸಂಖ್ಯೆ ಹೇರಳವಾಗಿದ್ದು, ಜಾಗತಿಕ ಬೇಡಿಕೆಯನ್ನು ಪೂರೈಸುವ ಸಾಮರ್ಥ್ಯ ಹೊಂದಿದೆ.- ಉತ್ಪಾದನಾ ವೆಚ್ಚದ ಸವಾಲು: ಪಾಶ್ಚಿಮಾತ್ಯ ದೇಶಗಳಲ್ಲಿ ಸಂಶೋಧನೆ, ಅಭಿವೃದ್ಧಿ (R&D) ಮತ್ತು ಉತ್ಪಾದನಾ ವೆಚ್ಚಗಳು ಗಗನಕ್ಕೇರುತ್ತಿವೆ. ಹೀಗಾಗಿ ಭಾರತದೊಂದಿಗೆ ಕೈಜೋಡಿಸುವುದು ಅವರಿಗೆ ಅನಿವಾರ್ಯವೂ ಹೌದು, ಲಾಭದಾಯಕವೂ ಹೌದು. ಇದು ಭಾರತಕ್ಕೆ ದೊಡ್ಡ ಮಾರುಕಟ್ಟೆ ಅವಕಾಶಗಳನ್ನು ಸೃಷ್ಟಿಸುತ್ತದೆ.➤ ಮುಕ್ತ ವ್ಯಾಪಾರ ಒಪ್ಪಂದಗಳ (FTAs) ವೇಗವರ್ಧನೆ: ಭಾರತವು ಕಳೆದ 3 ರಿಂದ 3.5 ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ತನ್ನ ಆರ್ಥಿಕ ರಾಜತಾಂತ್ರಿಕತೆಯನ್ನು ಬಲಪಡಿಸಿದೆ. ಭಾರತದ ವಿಶಾಲ ಮಾರುಕಟ್ಟೆಯನ್ನು ಜಾಗತಿಕ ಬಂಡವಾಳಕ್ಕೆ ಮುಕ್ತಗೊಳಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪ್ರಮುಖ ಸಾಧನೆ: ಕಳೆದ ಮೂರೂವರೆ ವರ್ಷಗಳಲ್ಲಿ ಭಾರತವು 38 ಶ್ರೀಮಂತ ರಾಷ್ಟ್ರಗಳನ್ನು ಒಳಗೊಂಡ ಒಟ್ಟು 9 ಮುಕ್ತ ವ್ಯಾಪಾರ ಒಪ್ಪಂದಗಳಿಗೆ (Free Trade Agreements - FTAs) ಸಹಿ ಹಾಕಿದೆ. ➤ ಮೂಲಸೌಕರ್ಯ ಮತ್ತು ಉದ್ಯಮ ಸ್ನೇಹಿ ಸುಧಾರಣೆಗಳು: ಮೇಕ್ ಇನ್ ಇಂಡಿಯಾ (Make in India): ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವುದು ಮತ್ತು ಜಾಗತಿಕ ಉತ್ಪಾದನಾ ಹಬ್ ಆಗಿ ಭಾರತವನ್ನು ಬೆಳೆಸುವುದು. ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ (Ease of Doing Business): ಉದ್ಯಮ ಪ್ರಕ್ರಿಯೆಗಳನ್ನು ಸರಳಗೊಳಿಸುವುದು, ಪರವಾನಗಿ ನಿಯಮಗಳ ಸಡಿಲಿಕೆ ಮತ್ತು ಹೂಡಿಕೆಗೆ ಪೂರಕ ವಾತಾವರಣ ನಿರ್ಮಾಣ. ಮೂಲಸೌಕರ್ಯ ಅಭಿವೃದ್ಧಿ: ಬಂದರುಗಳು, ಹೆದ್ದಾರಿಗಳು ಮತ್ತು ಡಿಜಿಟಲ್ ಮೂಲಸೌಕರ್ಯಗಳನ್ನು ಜಾಗತಿಕ ಗುಣಮಟ್ಟಕ್ಕೆ ತಕ್ಕಂತೆ ಸುಧಾರಿಸುವುದು. ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ