* ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ನವದೆಹಲಿ ಭೇಟಿಯ ಸಂದರ್ಭದಲ್ಲಿ ಭಾರತ ಮತ್ತು ಯುಎಇ ನಾಗರಿಕ ಪರಮಾಣು ಸಹಕಾರಕ್ಕಾಗಿ ಮಹತ್ವದ ತಿಳುವಳಿಕೆ ಒಪ್ಪಂದಕ್ಕೆ (MOU) ಸಹಿ ಹಾಕಿವೆ.* ಪರಮಾಣು ವಿದ್ಯುತ್ ಸ್ಥಾವರ ಕಾರ್ಯಾಚರಣೆಗಳು, ನಿರ್ವಹಣೆ ಮತ್ತು ಹೂಡಿಕೆಯ ಅವಕಾಶಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ NPCIL ಮತ್ತು ENEC ನಡುವಿನ ಈ ರೀತಿಯ ಮೊದಲ ತಿಳುವಳಿಕಾ ಒಪ್ಪಂದವಾಗಿದೆ.* ಅಬುಧಾಬಿ ನ್ಯಾಶನಲ್ ಆಯಿಲ್ ಕಂಪನಿ (ADNOC) ಮತ್ತು ಇಂಡಿಯಾ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್ (ISPRL) ನಡುವೆ ವಾರ್ಷಿಕವಾಗಿ ಒಂದು ಮಿಲಿಯನ್ ಮೆಟ್ರಿಕ್ ಟನ್ LNG (ದ್ರವೀಕೃತ ನೈಸರ್ಗಿಕ ಅನಿಲ) ಯ ದೀರ್ಘಾವಧಿಯ ಪೂರೈಕೆಗಾಗಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ ನಾಲ್ಕು ಒಪ್ಪಂದಗಳಲ್ಲಿ ಸೇರಿವೆ ಎಂದು MEA ಹೇಳಿದೆ.* ಭಾರತದಲ್ಲಿ ಫುಡ್ ಪಾರ್ಕ್ ಆರಂಭಿಸಲು ಗುಜರಾತ್ ಸರಕಾರ ಹಾಗೂ ಅಬುಧಾಬಿ ಡೆವಲಪ್‌ಮೆಂಟಲ್ ಹೋಲ್ಡಿಂಗ್ ಕೆಂಪೆನಿ ಪಿಐಎಸ್‌ಸಿ ಪ್ರತ್ಯೇಕ ಒಪ್ಪಂದವೊಂದಕ್ಕೆ ಕೂಡ ಸಹಿ ಹಾಕಿವೆ.* ಸಮಗ್ರ ವ್ಯೆಹಾತ್ಮಕ ಬಾಂಧವ್ಯವನ್ನು ವೃದ್ಧಿಸುವ ಗುರಿಯೊಂದಿಗೆ ಭಾರತ ಹಾಗೂ ಯುಎಇ ನಡುವಿನ ಬಹುಮುಖಿ ಬಾಂಧವ್ಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಯುವರಾಜ ಎಐ ನಹ್ಯಾನ್ ಚರ್ಚೆ ನಡೆಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣದೀರ್ ಜೈಸ್ವಾಲ್ ತಿಳಿಸಿದ್ದಾರೆ.