* ಭಾರತದ ಅತ್ಯಂತ ದೊಡ್ಡ ತೈಲ ಕಂಪನಿ ಭಾರತೀಯ ತೈಲ ನಿಗಮವು (IOC) ನವೀಕರಿಸಬಹುದಾದ ಇಂಧನ ಘಟಕಗಳ ಸ್ಥಾಪನೆಗೆ 1,660 ಕೋಟಿ ರೂ. ಹೂಡಿಕೆ ಮಾಡಲಿದೆ.* ಭಾರತೀಯ ತೈಲ ನಿಗಮವು ಮತ್ತು ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮದ ಸೇರಿಕೊಂಡು ಈ ಯೋಜನೆಯನ್ನು ಜೂನ್‌ನಲ್ಲಿ 50:50 ಪಾಲುದಾರಿಕೆಯಲ್ಲಿ ಇಂಡಿಯನ್ ಆಯಿಲ್ ಎನ್‌ಟಿಪಿಸಿ ಗ್ರೀನ್ ಎನರ್ಜಿ ಪ್ರೈ. ಲಿ. ಎಂಬ ಕಂಪನಿಯನ್ನು ಸ್ಥಾಪಿಸಿವೆ.* ತೈಲ ಕಂಪನಿಗಳ ಸಂಸ್ಕರಣಾಗಾರಗಳಿಗೆ ದಿನದ 24 ತಾಸು ವಿದ್ಯುತ್ ಪೂರೈಸುವುದಕ್ಕೆ ನವೀಕರಿಸಬಹುದಾದ ಇಂಧನ ಜಿಇವ ಘಟಕಗಳನ್ನು ಸ್ಥಾಪಿಸುವುದು ಇದರ ಉದ್ದೇಶವಾಗಿದೆ.* ಸೌರಶಕ್ತಿ, ಪವನ ಶಕ್ತಿ ಮತ್ತು ಇತರ ನವೀಕರಿಸಬಹುದಾದ ಇಂಧನ ಘಟಕಗಳನ್ನು ಈ ಕಂಪನಿಯು ಸ್ಥಾಪಿಸಲಿದ್ದು, ಸಂಸ್ಕರಣಾಗಾರಗಳಿಗಾಗಿ ಭಾರತೀಯ ತೈಲ ನಿಗಮವು ಕನಿಷ್ಠ 650 ಮೆಗಾವಾಟ್ ಸಾಮರ್ಥ್ಯದ ಘಟಕ ಸ್ಥಾಪನೆಯ ಗುರಿಯನ್ನು ಹೊಂದಿದೆ.