Job Description: * ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ಭಾರತ ಅಗ್ರಸ್ಥಾನದಿಂದ 2ನೇ ಸ್ಥಾನಕ್ಕೆ ಕುಸಿದಿದ್ದರೆ, ಏಕದಿನ ಮತ್ತು ಟಿ20 ರಾಂಕಿಂಗ್‌ನಲ್ಲಿ ಅಗ್ರಸ್ಥಾನ ಸ್ಥಾನದಲ್ಲಿದೆ. * ಟೆಸ್ಟ್‌ ರ‍್ಯಾಂಕಿಂಗ್ ನಲ್ಲಿ ವಿಶ್ವ ನಂ. 1 ಚಾಂಪಿಯನ್ ಆದ ಆಸ್ಟ್ರೇಲಿಯಾ ತಂಡ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ಅಗ್ರಸ್ಥಾನದಲ್ಲಿದೆ. ಇಂಗ್ಲೆಂಡ್ ಮೂರನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ 4ನೇ ಸ್ಥಾನವನ್ನು ಪಡೆದುಕೊಂಡಿದೆ. * 2021ರ ಮೇ ನಂತರದ ಎಲ್ಲ ಸರಣಿಗಳನ್ನು ರ‍್ಯಾಂಕಿಂಗ್ ಗೆ ಪರಿಗಣಿಸಲಾಗಿದೆ. 2020-21ರ ಸಾಲಿನಲ್ಲಿ ಭಾರತ ತಂಡ ಆಸೀಸ್ ವಿರುದ್ಧ 2-1ರಿಂದ ಸರಣಿ ಗೆದ್ದಿರುವುದನ್ನು ರ‍್ಯಾಂಕಿಂಗ್ ನಿಂದ ಕೈಬಿಟ್ಟಿರುವುದು ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. * ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 124 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಭಾರತ 120 ಅಂಕಗಳೊಂದಿಗೆ 2ನೇ ಸ್ಥಾನಕ್ಕೆದಲ್ಲಿದೆ. ಉಳಿದಂತೆ 3ರಿಂದ 9ನೇ ಸ್ಥಾನಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇಂಗ್ಲೆಂಡ್ (105), ದಕ್ಷಿಣ ಆಫ್ರಿಕಾ (103)ಮತ್ತು ನ್ಯೂಜಿಲೆಂಡ್ (96) ತಂಡಗಳು ಕ್ರಮವಾಗಿ 3, 4, 5ನೇ ಸ್ಥಾನದಲ್ಲಿವೆ. ಏಕದಿನ ಮತ್ತು ಟಿ20 ರ‍್ಯಾಂಕಿಂಗ್‌ನಲ್ಲಿ ಪರಿಷ್ಕರಣೆಯ ಬಳಿಕ 2023ರ ಮೊದಲಿನ ಫಲಿತಾಂಶಗಳಿಗೆ ಶೇ.50 ಅಂಕ ಮತ್ತು ನಂತರದ ಫಲಿತಾಂಶಗಳಿಗೆ ಶೇ. 100 ಅಂಕಗಳನ್ನು ನೀಡಲಾಗಿದೆ. * ಏಕದಿನ ರ‍್ಯಾಂಕಿಂಗ್‌ನ ಅಗ್ರ 10ರಲ್ಲಿ ಯಾವುದೇ ತಂಡಗಳ ಸ್ಥಾನ ಪಲ್ಲಟವಾಗಿಲ್ಲ. ಟಿ20 ರ‍್ಯಾಂಕಿಂಗ್ ನಲ್ಲಿ ಭಾರತ 264 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದಿರುವ ನಡುವೆ ಇತರ ತಂಡಗಳ ಸ್ಥಾನ ಬದಲಾವಣೆ ಕಂಡಿದೆ. ಆಸೀಸ್ 257 ಅಂಕಗಳೊಂದಿಗೆ 2ನೇ ಸ್ಥಾನಕ್ಕೇರಿದೆ. ಇಂಗ್ಲೆಂಡ್ 252 ಅಂಕಗಳೊಂದಿಗೆ 3ನೇ ಸ್ಥಾನಕ್ಕಿಳಿದಿದೆ.