* 2023 ಸೆಪ್ಟೆಂಬರ್ 2ರಂದು ಉಡ್ಡಯನಗೊಂಡಿದ್ದ ಆದಿತ್ಯ ಎಲ್-1 ನೌಕೆಯು 2024 ಜನವರಿ 6 ರಿಂದ ಹ್ಯಾಲೊ ಆರ್ಬಿಟ್ ಪರಿಭ್ರಮಣೆಯನ್ನು ಆರಂಭಿಸಿತ್ತು.* ಭಾರತದ ಮೊದಲ ಸೂರ್ಯಯಾನದ ಆದಿತ್ಯ ಎಲ್–1 ಬಾಹ್ಯಾಕಾಶ ನೌಕೆಯು ಸೂರ್ಯನ ಸುತ್ತಲಿನ ಮೊದಲ ಹ್ಯಾಲೊ ಆರ್ಬಿಟ್ ಭೂಮಿ ಮತ್ತು ಸೂರ್ಯ ನ ಸುತ್ತಲಿನ ಎಲ್–1 ಪಾಯಿಂಟ್‌ ಪರಿಭ್ರಮಣೆಯನ್ನು ಪೂರ್ಣಗೊಳಿಸಿದೆ.* ಎಲ್–1 ಪಾಯಿಂಟ್ ಪರಿಭ್ರಮಣೆ ಪೂರ್ಣಗೊಳಿಸಲು 178 ದಿನಗಳನ್ನು ಇದು ತೆಗೆದುಕೊಂಡಿದೆ. ಪರಿಭ್ರಮಣೆ ವೇಳೆ ನೌಕೆಗೆ ಅಂತರಿಕ್ಷದಲ್ಲಿ ಅನಿರೀಕ್ಷಿತ ಅಡ್ಡಿಗಳು ಎದುರಾಗುವ ಸಾಧ್ಯತೆ ಇತ್ತು. ಅವೆಲ್ಲವನ್ನು ಮೀರಿ ಈಗ ಗುರಿ ತಲುಪಿದೆ.* ಎಲ್1 ಪಾಯಿಂಟ್ ಸುತ್ತಲಿನ ಹ್ಯಾಲೊ ಆರ್ಬಿಟ್ಗ್‌ ಒಂದು ವೀಕ್ಷಣಾಲಯವನ್ನು ಸೇರಿಸುವ ಮೂಲಕ ಗ್ರಹಣ ಸೇರಿದಂತೆ ಯಾವುದೇ ಸಂದರ್ಭದಲ್ಲಿ ಸೂರ್ಯನ ವಾತಾವರಣವನ್ನು ನಿರಂತರವಾಗಿ ಗಮನಿಸುವ ಕಾರ್ಯ ಇಸ್ರೋ ಅಧಿಕಾರಿಗಳದ್ದಾಗಿತ್ತು.