* ಹೂವಿನಹಡಗಲಿ (ವಿಜಯನಗರ ಜಿಲ್ಲೆ) ಪಟ್ಟಣದ ಹಂಪಸಾಗರ ರಸ್ತೆಯ ಶಿವಶಾಂತವೀರ ಸಮುದಾಯ ಭವನ ಎದುರು ಇರುವ ಪುರಾತನ ಪುಷ್ಕರಣಿಯಲ್ಲಿ ಕಲ್ಯಾಣಿಯ ಚಾಲುಕ್ಯರ ಕಾಲದ ಶಿಲಾ ಶಾಸನ ಪತ್ತೆಯಾಗಿದೆ. ಸಂಶೋಧಕಿ ಎಂ.ಪಿ.ವೀಣಾ ಮಹಾಂತೇಶ ತಂಡದ ಸಂಶೋಧನೆ ವೇಳೆ ಪತ್ತೆಯಾಗಿದೆ.* 18 ಸಾಲುಗಳು ಇರುವ ತುಂಡಾದ ಶಾಸನದಲ್ಲಿ ಕಾಲ, ಊರು, ಸಾಮಂತರ ವಿವರಣೆ ಅಸ್ಪಷ್ಟವಾಗಿವೆ.* ಲಿಪಿಯ ಶೈಲಿ, ಭಾಷೆ, ಸಾಹಿತ್ಯ ಮತ್ತು ಶಾಸನ ಕೆತ್ತನೆಗೆ ಬಳಸಿದ ಶಿಲೆ ಗಮನಿಸಿದಾಗ ಚಾಲುಕ್ಯರ ಶಿಲಾ ಶಾಸನ ವೆಂದು ಗುರುತಿಸಬಹುದು' ಎಂದು ವೀಣಾ ಅವರು ದ ತಿಳಿಸಿದರು.* 'ಶಾಸನದ ಶೇ 25ರಷ್ಟು ತುಂಡು ಮಾತ್ರ 2 ಪತ್ತೆಯಾಗಿದೆ. ಮೇಲ್ಬಾಗ, ಕೆಳಭಾಗದ ಸಾಲುಗಳು ನಾಶವಾಗಿವೆ. ಮೂರನೇ ಸಾಲಿನಲ್ಲಿ ಯೋಗಿಯೊಬ್ಬರ ಉಲ್ಲೇಖವಿದೆ. ಯೋಗಿಯ ಹೆಸರು ಇರುವಲ್ಲೇ ಶಿಲೆ ತುಂಡಾಗಿ ಹೋಗಿದೆ.* ಇದನ್ನು ಕ್ರಿ.ಶ. 1109ರಲ್ಲಿ 'ಈ ಶಾಸನದ ಲಿಪಿಗೂ ಪಾಂಡುರಂಗ ದೇವಸ್ಥಾನ ಬಳಿ ದೊರೆತ ಶಾಸನದ ವಿವರಣೆಗೂ ಸಾಮ್ಯತೆ ಇದೆ. ಅಧ್ಯಯನಕಾರ ಡಾ. ಕೆ.ರವಿಕುಮಾರ್ ನವಲಗುಂದ ಶಾಸನದ ಲಿಪಿ ಓದಿ ಅರ್ಥೈಸಿದ್ದಾರೆ. ಹಂಪಿ ಕನ್ನಡ ವಿವಿಯ ಸಂಶೋಧನಾ ವಿದ್ಯಾರ್ಥಿ ವೀರೇಶ ನೆರವಾಗಿದ್ದಾರೆ' ಎಂದರು.* ಕಲ್ಯಾಣಿ ಚಾಲುಕ್ಯರ ಅಸಂಖ್ಯಾತ ಶಾಸನಗಳು ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ಪತ್ತೆಯಾಗಿದ್ದು, ಅವುಗಳಲ್ಲಿ ಮುಖ್ಯವಾಗಿ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರ ಭಾಗಗಳಲ್ಲಿ ಹೆಚ್ಚು ಕಂಡುಬರುತ್ತವೆ.* ಈ ಶಾಸನಗಳು ಸಾಮಾನ್ಯವಾಗಿ ತಮಗೆ ಅನುಕೂಲಕರವಾದ ಸ್ಥಳಗಳಲ್ಲಿ, ದೇವಸ್ಥಾನಗಳಲ್ಲಿ, ತಿರುಪತಿಗಳಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಅಥವಾ ರಾಜಕೀಯ, ಧಾರ್ಮಿಕ ಕಾರ್ಯಕಲಾಪಗಳಿಗೆ ಸಂಬಂಧಿಸಿದಂತೆ ಕೆತ್ತಲಾಗಿದೆ.