* ದೇಶದ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲು ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ 'ಮೇರಿ ಮಾತಿ ಮೇರಾ ದೇಶ್  (ನನ್ನ ಭೂಮಿ-ನನ್ನ ದೇಶ) ಅಭಿಯಾನವನ್ನು ಪ್ರಾರಂಭಿಸಲಾಗುವುದು' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 30 ರಂದು ತಿಳಿಸಿದ್ದಾರೆ.* ಪ್ರಧಾನಿ ನರೇಂದ್ರ ಮೋದಿ ಅವರು ಮಾಸಿಕ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮರಣಾರ್ಥವಾಗಿ ಪಂಚಾಯಿತಿಗಳಲ್ಲಿ ವಿಶೇಷ ಶಾಸನಗಳನ್ನು ಸ್ಥಾಪಿಸಲಾಗುವುದು.* ನನ್ನ ಭೂಮಿ-ನನ್ನ ದೇಶ ಅಭಿಯಾನದ ಅಡಿಯಲ್ಲಿ ಅಮೃತ ಕಳಸ ಯಾತ್ರೆಯನ್ನು ಆಯೋಜಿಸಲಾಗಿದ್ದು, ಹಾಗೂ 7,500 ಕುಂಡಗಳಲ್ಲಿ ದೇಶದ ವಿವಿಧ ಭಾಗಗಳಿಂದ ಮಣ್ಣನ್ನು ಹಾಗೂ ಸಸಿಗಳನ್ನು ದೆಹಲಿಗೆ ತರಲಾಗುವುದು ಎಂದರು.ಪ್ರಧಾನಿ ಮೋದಿ ಅವರು ತಿಳಿಸಿದ ಇತರ ಪ್ರಮುಖ ಅಂಶಗಳು - ಈ ವರ್ಷವೂ 'ಹರ್ ಘರ್ ತಿರಂಗಾ' ಅಭಿಯಾನ ಆಚರಿಸಲು ಪ್ರಧಾನಿ ಕರೆ - ದೇಶದ ಪವಿತ್ರ ಸ್ಥಳಗಳಿಗೆ ಹೆಚ್ಚುತ್ತಿರುವ ಯಾತ್ರಿಕರ ಸಂಖ್ಯೆ ಕುರಿತು ಉಲ್ಲೇಖ. - ನೀರಿನ ಸಂರಕ್ಷಣೆಗಾಗಿ ವಿವಿದೆಡೆ ಜನರ ನೂತನ ಪ್ರಯತ್ನ.- ಪ್ರವಾಹ ಹಾಗೂ ನೈಸರ್ಗಿಕ ವಿಪತ್ತಿನಿಂದ ಜನರು ಅನುಭವಿಸಿದ ಸಮಸ್ಯೆಗಳ ಕುರಿತು.- ಪ್ರಾಚೀನ ಕಲಾಕೃತಿಗಳನ್ನು ಭಾರತಕ್ಕೆ ಅಮೆರಿಕವು ಹಿಂದಿರುಗಿಸಿದರ ಬಗ್ಗೆ ಮಾಹಿತಿ.