Job Description: * ಭಾರತದಲ್ಲಿಯ "ಹಸಿರು ರಾಷ್ಟ್ರೀಯ ಹೆದ್ದಾರಿ ಕಾರಿಡಾರ್ ಯೋಜನೆ"ಗಾಗಿ ಭಾರತದ ನಾಲ್ಕು ರಾಜ್ಯಗಳಾದ್ಯಂತ 781 ಕಿಲೋಮೀಟರ್ ಹಸಿರು ಹೆದ್ದಾರಿಗಳನ್ನು ನಿರ್ಮಿಸಲು ಇತ್ತೀಚೆಗೆ ಸಾಲ ಒಪ್ಪಂದಕ್ಕೆ ಭಾರತ ಮತ್ತು ವಿಶ್ವ ಬ್ಯಾಂಕ್ ಸಹಿ ಹಾಕಿವೆ. * ಒಟ್ಟು 500 ಮಿಲಿಯನ್ ಡಾಲರ್ ಸಾಲದ ನೆರವನ್ನು ಹೆದ್ದಾರಿಗಳ ನಿರ್ಮಾಣಕ್ಕೆ ಬಳಸಲಾಗುತ್ತಿದ್ದು, ಈ ಯೋಜನೆಯು ಭಾರತದ 4 ರಾಜ್ಯಗಳಲ್ಲಿ ಹಸಿರು ರಾಷ್ಟ್ರೀಯ ಹೆದ್ದಾರಿ ಕಾರಿಡಾರ್ ಯೋಜನೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. * ಹಸಿರು ರಾಷ್ಟ್ರೀಯ ಹೆದ್ದಾರಿ ಕಾರಿಡಾರ್ ಯೋಜನೆಯು ಸುರಕ್ಷಿತ ಮತ್ತು ಪರಿಸರ ಸ್ನೇಹಿ ಹೆದ್ದಾರಿಗಳನ್ನು ಪ್ರದರ್ಶಿಸಲು ಹಸಿರು ತಂತ್ರಜ್ಞಾನಗಳು ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವದ ಬಳಕೆಯನ್ನು ಉತ್ತೇಜಿಸುತ್ತದೆ. ಯೋಜನೆಯು ಭಾರತದಲ್ಲಿ ಸುಸ್ಥಿರ ಮೂಲಸೌಕರ್ಯಕ್ಕಾಗಿ ಹೊಸ ಮಾನದಂಡವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.