* ಯೆಸ್ ಬ್ಯಾಂಕ್ ಇದೀಗ ಹೊಸ ಬ್ರ್ಯಾಂಡ್ ಲೋಗೋ ಅನಾವರಣ ಮಾಡಿದ್ದು, ಹೊಸ ರೂಪದಲ್ಲಿ ಜನರ ಮುಂದೆ ಹೋಗಲು ತೀರ್ಮಾನಿಸಿದೆ.  * ಖಾಸಗಿ ರಂಗದ ಪ್ರಮುಖ ಬ್ಯಾಂಕ್‌ ಆಗಿರುವ ಯೆಸ್ ಬ್ಯಾಂಕ್ ಮಂಗಳವಾರ (ಮೇ 30) ಕಂಪನಿಯ ಹೊಸ ಲೋಗೋವನ್ನು ಬಿಡುಗಡೆ ಮಾಡಿದ್ದು, ಬ್ಯಾಂಕಿನ ಪ್ರಮುಖ ಉದ್ದೇಶವನ್ನು ಸಾರುವ 'ಲೈಫ್ ಕೊ ಬನಾವೊ ರಿಚ್' ಎಂಬ ಅಡಿಬರಹದೊಂದಿಗೆ ಸಮಗ್ರ ಅಭಿಯಾನವನ್ನು ನಡೆಸಲು ಸಿದ್ದವಾಗಿದೆ.* "ವಿನ್ಯಾಸದ ಭಾಷೆಯು ಡಿಜಿಟಲ್ ಸ್ನೇಹಿಯಾಗಿದ್ದು, ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವ ಬ್ರ್ಯಾಂಡ್ ಅನ್ನು ಪ್ರತಿಬಿಂಬಿಸುತ್ತದೆ. ಇದು ಬ್ಯಾಂಕ್‌ನ ಪ್ರಗತಿಪರ ಮನೋಭಾವದ ಜತೆ ತನ್ನ ಪ್ರಮುಖ ಮೌಲ್ಯಗಳಿಗೆ ಒತ್ತು ನೀಡಿರುವುದನ್ನು ಬಿಂಬಿಸುತ್ತದೆ.