* 'ಹ್ಯಾವಿಶೂರ್' ಲಸಿಕೆಯನ್ನು ದೇಶದ ಪ್ರಮುಖ ಜೈವಿಕ ಔಷಧೀಯ ಕಂಪನಿ ಹೈದರಾಬಾದ್ ಮೂಲದ ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್ (ಐಐಎಲ್) ದೇಶೀಯವಾಗಿ ಅಭಿವೃದ್ಧಿಪಡಿಸಿದ್ದು. 'ಆತ್ಮನಿರ್ಭರ ಭಾರತ'ದ ಪರಿಕಲ್ಪನೆಯಡಿ ಹೈದರಾಬಾದ್‌ನಲ್ಲಿ ಅಭಿವೃದ್ಧಿಪಡಿಸಿರುವ ಹ್ಯಾವಿಶೂರ್, ಹೆಪಟೈಟಿಸ್ ಎ ಕಾಯಿಲೆಯ ಮೊದಲ ಲಸಿಕೆ ಎನಿಸಿದೆ.* ಹೈದರಾಬಾದ್ ಮೂಲದ ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್ (ಐಐಎಲ್) ರಾಷ್ಟ್ರೀಯ ಡೈರಿ ಡೆವಲಪ್‌ಮೆಂಟ್ ಬೋರ್ಡ್ (ಎನ್‌ಡಿಡಿಬಿ) ಯ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಮತ್ತು ಭಾರತದ ಪ್ರಮುಖ ಬಯೋಫಾರ್ಮಾಸ್ಯುಟಿಕಲ್ ಕಂಪನಿಯು ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಹೆಪಟೈಟಿಸ್ ಎ ಲಸಿಕೆ 'ಹ್ಯಾವಿಶ್ಯೂರ್' ಲಸಿಕೆಯನ್ನು ಹೈದರಾಬಾದ್‌ನಲ್ಲಿ ಬಿಡುಗಡೆ ಮಾಡಿದೆ.* ಹೆಪಟೈಟಿಸ್‌ ಎ ಪಿತ್ತಜನಕಾಂಗದ ಸೋಂಕು ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಸವಾಲಾಗಿರುವ ಇದು ಸಾಂಕ್ರಾಮಿಕ ರೋಗವು ಹೌದು. ಸಾಮನ್ಯವಾಗಿ ಕಲುಷಿತ ಆಹಾರ ಅಥವಾ ಕಲುಷಿತ ನೀರಿನ ಸೇವನೆಯ ಮೂಲಕ ಹರಡುತ್ತದೆ. ಈ ಕಾಯಿಲೆ ತಡೆಗಟ್ಟುವಲ್ಲಿ ಹ್ಯಾವಿಶ್ಯೂರ್ ಲಸಿಕೆಯು ನಿರ್ಣಾಯಕ ಪಾತ್ರ ವಹಿಸಲಿದೆ.