Job Description: * ಎಂಟನೇ ನಿಜಾಮ ಎಂದು ಕರೆಯಲಾಗುತ್ತಿದ್ದ ಹೈದರಾಬಾದ್ ನಿಜಾಮರ ವಂಶಸ್ಥರಾದ ಮುಕರಮ್ ಜಾಹ್ ಬಹದ್ದೂರ್ ರವರು ತಮ್ಮ 86 ನೇ ವಯಸ್ಸಿನಲ್ಲಿ ಟರ್ಕಿಯ ಇಸ್ತಾಂಬುಲ್ ನಲ್ಲಿ ಶನಿವಾರ ಜನೆವರಿ 14 ರಂದು ನಿಧನರಾದರು. * ಮುಕರಮ್ ಜಾಹ್ ಬಹದ್ದೂರ್ ರವರ ಇಚ್ಛೆಯಂತೆ ಅವರ ಅಂತ್ಯಕ್ರಿಯೆಯನ್ನು ಹೈದರಾಬಾದ್ ನಲ್ಲಿ ಜನೆವರಿ 17 ರಂದು ಪೂರ್ವಜರ ಸಮಾಧಿಗಳು ಇರುವ ಜಾಗದಲ್ಲಿ ನೆರವೇರಿಸಲಾಗುತ್ತದೆ. * 1724 ರಿಂದ ಹೈದರಾಬಾದ್ ಅನ್ನು ಆಳಿದ ನಿಜಾಮರ ಕುಟುಂಬದ ಇತರ ಸದಸ್ಯರನ್ನು ಸಮಾಧಿ ಮಾಡುವ ಕಮಾನಿನ ಸಿದ್ಧತೆಯನ್ನು ನಿಜಾಮ್ ಟ್ರಸ್ಟ್‌ನ ಪ್ರತಿನಿಧಿಗಳು ನೋಡಿಕೊಳ್ಳುತ್ತಿದ್ದರು.