* ಜನಪ್ರಿಯ ಪಾನೀಯ ಬ್ರಾಂಡ್‌ಗಳಾದ 'ಹಾರ್ಲಿಕ್ಸ್' ಮತ್ತು 'ಬೂಸ್ಟ್' ಮಾಲೀಕರಾದ ಹಿಂದೂಸ್ತಾನ್ ಯೂನಿಲಿವ‌ರ್ ಲಿಮಿಟೆಡ್ (HUL), ಅದರ ಲೇಬಲ್‌ನಿಂದ 'ಆರೋಗ್ಯ ಪಾನೀಯ' ಎಂಬುದನ್ನು ಕೈಬಿಟ್ಟಿದೆ ಮತ್ತು ಅದರ ಬ್ರಾಂಡ್‌ಗಳನ್ನು "ಕ್ರಿಯಾತ್ಮಕ ಮತ್ತು ಪೌಷ್ಟಿಕ ಪಾನೀಯಗಳು" ಎಂದು ಮರುನಾಮಕರಣ ಮಾಡಿದೆ.*  ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಇ-ಕಾಮರ್ಸ್ ವೆಬ್‌ಸೈಟ್‌ಗಳಿಗೆ ತಮ್ಮ ವೆಬ್‌ಸೈಟ್‌ಗಳಲ್ಲಿನ 'ಆರೋಗ್ಯ' ವರ್ಗದಿಂದ ಎಲ್ಲಾ ಪಾನೀಯಗಳು ಮತ್ತು ಪೇಯಗಳನ್ನು ತೆಗೆದುಹಾಕಲು ನಿರ್ದೇಶಿಸಿದ ನಂತರ HUL ನ ನಿರ್ಧಾರವು ಬಂದಿದೆ. * ಈ ಪಾನೀಯಗಳಲ್ಲಿನ ಸಕ್ಕರೆ ಅಂಶವು ಸ್ವೀಕಾರಾರ್ಹ ಮಿತಿಗಿಂತ ಹೆಚ್ಚು ಎಂದು ಕೇಂದ್ರ ತಿಳಿಸದೆ.* 2024ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಹಿಂದೂಸ್ಥಾನ್‌ ಯುನಿಲಿವರ್‌ ಲಿಮಿಟೆಡ್ ನ ಕ್ರೋಢೀಕೃತ ನಿವ್ವಳ ಲಾಭ 2,561 ಕೋಟಿ ರೂ.ಗೆ ಇಳಿಕೆ ಕಂಡಿದ್ದು, ಶೇ. 1.53ರಷ್ಟು ಕುಸಿದಿದೆ ಎಂದು ಷೇರು ವಿನಿಮಯ ಕೇಂದ್ರಗಳಿಗೆ ಸಲ್ಲಿಸಿದ ಫೈಲಿಂಗ್‌ನಲ್ಲಿ ಕಂಪನಿಯು ತಿಳಿಸಿದೆ.* ನಿಯಂತ್ರಕ ಸಂಸ್ಥೆಯ ಪ್ರಕಾರ ‘ಆರೋಗ್ಯ ಪಾನೀಯ’ವನ್ನು ಭಾರತದ ಆಹಾರ ಕಾನೂನುಗಳಲ್ಲಿ ವ್ಯಾಖ್ಯಾನಿಸಲಾಗಿಲ್ಲ ಮತ್ತು ಅದರ ಅಡಿಯಲ್ಲಿ ಆರೋಗ್ಯ ಪಾನೀಯವೆಂದು ವರ್ಗೀಕರಿಸುವುದು ನಿಯಮಗಳನ್ನು ಉಲ್ಲಂಘಿಸುತ್ತದೆ.* ಎಫ್‌ಎಸ್‌ಎಸ್‌ಎಐ ಈ ತಿಂಗಳ ಆರಂಭದಲ್ಲಿ ಡೈರಿ ಆಧಾರಿತ ಅಥವಾ ಮಾಲ್ಟ್ ಆಧಾರಿತ ಪಾನೀಯಗಳನ್ನು 'ಆರೋಗ್ಯ ಪಾನೀಯಗಳು' ಎಂದು ಲೇಬಲ್ ಮಾಡುವುದರ ವಿರುದ್ಧ ಇ-ಕಾಮರ್ಸ್ ಪೋರ್ಟಲ್‌ಗಳಿಗೆ ಸೂಚನೆ ನೀಡಿತ್ತು.