* ಹಾಲಿವುಡ್ ನ ಖ್ಯಾತ ನಟ, ಹ್ಯಾರಿ ಪಾಟರ್ (Harry Potter) ನಲ್ಲಿ ಹೆಡ್ ಮಾಸ್ಟರ್ ಪಾತ್ರ ಮಾಡುತ್ತಿದ್ದ ಮೈಕೆಲ್ ಗ್ಯಾಂಬೋನ್ (Michael Gambon) ನಿಧನರಾಗಿದ್ದಾರೆ. ನ್ಯೂಮೋನಿಯಾದಿಂದ ಬಳಲುತ್ತಿದ್ದ ಮೈಕಲ್ ಚಿಕಿತ್ಸೆ ಪಡೆಯುತ್ತಿದ್ದರು, ಹಲವು ದಿನಗಳಿಂದ ಆಸ್ಪತ್ರೆಗೂ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೈಕಲ್ ಇಹಲೋಕ ತ್ಯಜಿಸಿದ್ದಾರೆ.*  ಮೈಕೆಲ್ ಗ್ಯಾಂಬೊನ್ ಅವರು ಐರ್ಲೆಂಡ್‌ನಲ್ಲಿ ಜನಿಸಿದ್ದರು. * `ಹ್ಯಾರಿ ಪಾಟರ್' ಸರಣಿಯ ಎಂಟು ಸಿನಿಮಾಗಳ ಪೈಕಿ ಆರರಲ್ಲಿ ಗ್ಯಾಂಬೊನ್ ಅವರು, ಪ್ರೊಫೆಸರ್ ಅಲ್ಪಸ್ ಡಂಬಲ್ ಡೋರ್ ಪಾತ್ರದಲ್ಲಿ ನಟಿಸಿದ್ದರು. ವಿಲಿಯಂ ಷೇಕ್ಸ್‌ಪಿಯರ್ ರಚನೆಯ ನಾಟಕಗಳಲ್ಲಿನ ಹಲವು ಪಾತ್ರಗಳಿಗೆ ಜೀವ ತುಂಬಿದ್ದಾರೆ. * ಎಂಜಿನಿಯರ್ ಅಗಿ ತರಬೇತಿ ಪಡೆದಿದ್ದ ಅವರು ನಂತರ ನಾಟಕಗಳಲ್ಲಿ ಒಲವು ಹೊಂದಿದರು. 'ಒಥೆಲೊ' ನಾಟಕದ ಮೂಲಕ ಬಣ್ಣ ಹಚ್ಚಲು ಆರಂಭಿಸಿದರು. ಹೀಗೆ ಸಿನಿ ಪಯಣಕ್ಕೆ ಕಾಲಿಟ್ಟರು.* ಐದು ದಶಕಗಳಿಗೂ ಹೆಚ್ಚು ಕಾಲ ಟಿ.ವಿ, ರಂಗಭೂಮಿ, ರೇಡಿಯೊ, ಸಿನಿಮಾ ನಟನೆಯಲ್ಲಿ ತೊಡಗಿಕೊಂಡಿದ್ದ ಅವರಿಗೆ, 'ಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಕ್' ಹಾಗೂ 'ಟೆಲಿವಿಷನ್ ಆರ್ಟ್ಸ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಬಂದಿವೆ.