* ಜಾಗತಿಕ ವಿಶ್ವವಿದ್ಯಾಲಯಗಳ ಪೈಕಿ ಭಾರತೀಯ ವಿಜ್ಞಾನ ಸಂಸ್ಥೆ (IISC) ಯು 250 ರ ಒಳಗೆ ಸ್ಥಾನ ಪಡೆದುಕೊಂಡಿದ್ದು, ಜೊತೆಗೆ ಭಾರತದಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ.* ಭಾರತದ ಅಗ್ರ ವಿಶ್ವವಿದ್ಯಾನಿಲಯ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಟೈಮ್ಸ್ ಹೈಯರ್ ಎಜುಕೇಶನ್‌ನ ವಿಶ್ವ ವಿಶ್ವವಿದ್ಯಾಲಯದ ಶ್ರೇಯಾಂಕಗಳ ಅತಿದೊಡ್ಡ ಆವೃತ್ತಿಯಲ್ಲಿ 2017 ರಿಂದ ಮೊದಲ ಬಾರಿಗೆ 201-250 ರ ಸ್ಥಾನ ಗಳಿಸಿದೆ. * ಜಾಗತಿಕವಾಗಿ ಭಾರತದ 91 ಭಾರತೀಯ ಸಂಸ್ಥೆಗಳನ್ನು ಟೈಮ್ಸ್ ಹೈಯರ್ ಎಜುಕೇಶನ್‌ನ (THE) ಪಟ್ಟಿಯಲ್ಲಿ ಸೇರಿಸಲಾಗಿದೆ.* ಅಣ್ಣಾ ವಿಶ್ವವಿದ್ಯಾನಿಲಯ, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಮಹಾತ್ಮ ಗಾಂಧಿ ವಿಶ್ವವಿದ್ಯಾನಿಲಯ, ಶೂಲಿನಿ ಬಯೋಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಸೈನ್ಸಸ್ ವಿಶ್ವವಿದ್ಯಾನಿಲಯಗಳು ಭಾರತದ ಎರಡನೇ ಅತ್ಯುನ್ನತ ವಿಶ್ವವಿದ್ಯಾಲಯಗಳಾಗಿ ಸ್ಥಾನ ಪಡೆದಿವೆ.