Job Description: * ಗುಬ್ಬಿ ತಾಲೂಕಿನ ಬಿದಾರೇಹಳ್ಳ ಕಾವಲ್ ನಲ್ಲಿ ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನ (ಎಚ್ಎಎಲ್) ಹೆಲಿಕಾಪ್ಟರ್ ತಯಾರಿಕಾ ಘಟಕವನ್ನು ಪ್ರಧಾನಿ ನರೇಂದ್ರ ಮೋದಿಯವರು ಫೆ.6 ರಂದು ಉದ್ಘಾಟಿಸಿದರು. * ಈ ಘಟಕವು ಆರಂಭದಲ್ಲಿ ವರ್ಷಕ್ಕೆ 30 ಹೆಲಿಕಾಪ್ಟರ್ ತಯಾರಿಸುವ ಗುರಿ ಹೊಂದಿದೆ. ಈ ಘಟಕಕ್ಕೆ ಮೋದಿಯವರು 2016 ರಲ್ಲಿ ಭೂಮಿಪೂಜೆ ನೆರವೇರಿಸಿದ್ದರು. 615 ಎಕರೆ ಜಮೀನಿನಲ್ಲಿ ಈ ಘಟಕವನ್ನು ನಿರ್ಮಿಸಲಾಗಿದೆ. * ಮೊದಲ ಹಂತದಲ್ಲಿ 5 ಸಾವಿರ ಕೋಟಿ ಬಂಡವಾಳ ಹೂಡಿಕೆಯೊಂದಿಗೆ ಪ್ರಾರಂಭವಾಗಿರುವ ಈ ಘಟಕವು ಒಟ್ಟು 3 ಟನ್ ನಿಂದ 15 ಟನ್ ವರೆಗಿನ ಒಂದುಸಾವಿರಕ್ಕೂ ಹೆಚ್ಚು ಹೆಲಿಕಾಪ್ಟರ್ ತಯಾರಿಸುವ ಯೋಜನೆಯನ್ನು ರೂಪಿಸಿದೆ. ಹೆಲಿಕಾಪ್ಟರ್ ನಿರ್ಮಾಣ, ಜೋಡಣೆ, ಹೆಲಿಪ್ಯಾಡ್ ಹಾಗೂ ಆಡಳಿತ ಕಟ್ಟಡ ಇಲ್ಲಿದೆ.