* ಸೆಪ್ಟೆಂಬರ್‌ನಲ್ಲಿ 1.73 ಲಕ್ಷ ಕೋಟಿ ರೂಪಾಯಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವಾಗಿದೆ. ಈ ಮೂಲಕ ಕಳೆದ ವರ್ಷದ ಅವಧಿಗೆ ಹೋಲಿಸಿದರೆ ಸಂಗ್ರಹ ಶೇಕಡಾ 6.5ರಷ್ಟು ಅಲ್ಪ ಏರಿಕೆ ದಾಖಲಾಗಿದೆ.* ಕಳೆದ 40 ತಿಂಗಳಲ್ಲೇ ಜಿಎಸ್‌ಟಿ ಸಂಗ್ರಹದಲ್ಲಿ ದಾಖಲಾಗಿರುವ ಕನಿಷ್ಠ ಬೆಳವಣಿಗೆಯಾಗಿದೆ. ಕಳೆದ ವರ್ಷ ಅಂದರೆ 2023ರ ಸೆಪ್ಟೆಂಬರ್‌ನಲ್ಲಿ ಸರಕಾರ 1.63 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹಿಸಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಅಲ್ಪ ಏರಿಕೆ ದಾಖಲಾಗಿದೆ.* ಮರುಪಾವತಿ ಬಳಿಕ ಸೆಪ್ಟೆಂಬರ್‌ನಲ್ಲಿ ಸರಕಾರದ ಜಿಎಸ್‌ಟಿ ಸಂಗ್ರಹ 1.53 ಲಕ್ಷ ಕೋಟಿ ರೂ. ಆಗಿದೆ. ಈ ಮೂಲಕ ಕಳೆದ ಅವಧಿಗೆ ಹೋಲಿಸಿದರೆ ಶೇ. 3.9ರಷ್ಟು ಹೆಚ್ಚಿದೆ. ಆಗಸ್ಟ್‌ ತಿಂಗಳ ಜಿಎಸ್‌ಟಿ ಸಂಗ್ರಹದಲ್ಲೂ ಶೇ. 10ರಷ್ಟು ಏರಿಕೆ ದಾಖಲಾಗಿತ್ತು. ಈ ಮೂಲಕ 1,74,962 ಕೋಟಿ ರೂ. ತಲುಪಿತ್ತು. * 2023ರಲ್ಲಿ 1,59,069 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ ಸಂಗ್ರಹಿಸುವಲ್ಲಿ ಕೇಂದ್ರ ಸರಕಾರ ಸಫಲವಾಗಿತ್ತು.* ಜುಲೈ 1, 2017ರಲ್ಲಿ ದೇಶದಲ್ಲಿ ಜಿಎಸ್‌ಟಿ ಜಾರಿಗೊಳಿಸಲಾಗಿತ್ತು. ಇದರಿಂದ ರಾಜ್ಯ ಸರಕಾರಗಳು ಅನುಭವಿಸುವ ತೆರಿಗೆ ನಷ್ಟಕ್ಕೆ ಜೂನ್‌ 2022ರವರೆಗೆ ಪರಿಹಾರವನ್ನೂ ನೀಡಲಾಗಿತ್ತು.* ಜಿಎಸ್‌ಟಿ ಕೌನ್ಸಿಲ್‌ ಕ್ಯಾನ್ಸರ್‌ ಔಷಧಗಳ ಮೇಲಿನ ಜಿಎಸ್‌ಟಿಯನ್ನು ಶೇ. 12ರಿಂದ ಶೇ. 5ಕ್ಕೆ ಇಳಿಕೆ ಮಾಡಿದ್ದು, ಕುರುಕಲು ತಿಂಡಿಗಳ ಮೇಲಿನ ತೆರಿಗೆಯನ್ನು ಶೇ. 18ರಿಂದ ಶೇ. 12ಕ್ಕೆ ಇಳಿಕೆ ಮಾಡಿದೆ.